ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಧಾನಸೌಧದ ಕ್ಯಾಂಟೀನ್ ನಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಚಿವ ನಾರಾಯನಗೌಡ, ಶಾಸಕರು ಏಕವಚನದಲ್ಲಿ ಮಾತನಾಡಿದ್ದು ಬೇಸರವಾಯಿತು. ಗಲಾಟೆಯೇನೂ ಆಗಿಲ್ಲ ಎಂದು ಹೇಳಿದ್ದಾರೆ.
ವಿಧಾನಸೌಧದಲ್ಲಿ ಇಂದು ಆಡಳಿತ ಪಕ್ಷದ ಶಾಸಕ-ಸಚಿವರೇ ಗಲಾಟೆ ಮಾಡಿಕೊಂಡ ಘಟನೆ ನಡೆದಿದೆ. ಕಡೂರು ಶಾಸಕ ಬೆಳ್ಳಿ ಪ್ರಕಾಶ್ ಹಾಗೂ ಸಚಿವ ನಾರಾಯಣಗೌಡ ನಡುವೆ ವಿಧಾನಸೌಧದ ಕ್ಯಾಂಟೀನ್ ನಲ್ಲಿ ಪರಸ್ಪರ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸಿಕೊಳ್ಳುವ ಹಂತಕ್ಕೆ ಹೋಗಿದ್ದರು. ಕ್ಷೇತ್ರಕ್ಕೆ ಅನುದಾನ ವಿಚಾರ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳ ವರ್ಗಾವಣೆ ವಿಚಾರವಾಗಿ ಈ ಗಲಾಟೆ ನಡೆದಿದೆ ಎನ್ನಲಾಗಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವರು, ಗಲಾಟೆ ಏನಿಲ್ಲ. ಒಂದು ಸಾಮಾನ್ಯ ವರ್ಗಾವಣೆ ಪ್ರಕರಣ. ಅದರ ಬಗ್ಗೆ ಮಾತನಾಡೋಣ ಬನ್ನಿ ಎಂದಿದ್ದೆ. ಅವರು ಸ್ವಲ್ಪ ಏಕವಚನದಲ್ಲಿ ಮಾತನಾಡಿದರು. ಅದಕ್ಕೆ ನನಗೆ ಬೇಜಾರಾಯ್ತು. ಕ್ಷೇತ್ರದ ಕೆಲಸ ಮಾಡಿಕೊಡುವಾಗ ಕೆಲವೊಮ್ಮೆ ವಿಳಂಬವಾಗುತ್ತೆ. ಅದಕ್ಕೆ ತಪ್ಪು ತಿಳುವಳಿಕೆ ಬೇಡ ಎಂದರು.
ಈ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿರುವ ಶಾಸಕ ಬೆಳ್ಳಿ ಪ್ರಕಾಶ್, ಅಣ್ಣ-ತಮ್ಮಂದಿರ ಗಲಾಟೆಯಷ್ಟೇ. ನಾನಿನ್ನೂ ಬೆಳೆಯುತ್ತಿರುವವನು. ಪ್ರತಿಕ್ರಿಯೆ ನೀಡುವುದು ಬೇಡ ಎಂದು ಹೇಳಿದರು.
ಸಚಿವ, ಶಾಸಕರ ಮಧ್ಯೆ ಮಾರಾಮಾರಿ ತಡೆದ ಸತೀಶ್ ಜಾರಕಿಹೊಳಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ