ಪ್ರಗತಿವಾಹಿನಿ ಸುದ್ದಿ: ಪ್ರತ್ಯೇಕ ಸಭೆ ವಿಚಾರವಾಗಿ ಹೈಕಮಾಂಡ್ ಸಿಡಿಮಿಡಿಗೊಂಡ ಬೆನ್ನಲ್ಲೇ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದು ನಾನು, ಸತೀಶ್ ಜಾರಕಿಹೊಳಿ ಹಾಗೂ ಮಹದೇವಪ್ಪ ಸಹಜವಾಗಿ ಭೇಟಿ ಮಾಡಿದ್ದೆವು ಅಷ್ಟೇ. ಸಿಎಂ ಬದಲಾವಣೆ ಉದ್ದೇಶದಿಂದ ಈ ಸಭೆ ನಡೆಸಿಲ್ಲ ಎಂದಿದ್ದಾರೆ
ಇತ್ತೀಚೆಗೆ ಮೈಸೂರಿನಲ್ಲಿ ನಡೆದ ದಲಿತ ಸಚಿವರ ಪ್ರತ್ಯೇಕ ಸಭೆಯ ವಿವಾದ ಹೆಚ್ಚಾಗುತ್ತಿದ್ದಂತೆ ಪರಮೇಶ್ವರ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಈಗಾಗಲೇ ನಾನು ಸಿದ್ದರಾಮಯ್ಯನವರೇ ಐದು ವರ್ಷ ಸಿಎಂ ಆಗಿರುತ್ತಾರೆ ಎಂದು ಹೇಳಿದ್ದು, ಸಿಎಂ ಬದಲಾಯಿಸುವ ಯಾವುದೇ ಚಿಂತನೆ ಪಕ್ಷದಲ್ಲಿಲ್ಲ ಎಂದ ಪರಮೇಶ್ವರ್, ನಾನೊಬ್ಬ ಹಿರಿಯ ಸಚಿವನಾಗಿದ್ದು ನನಗೂ ಜವಾಬ್ದಾರಿ ಇದೆ ಇನ್ನು ಮುಂದೆ ಸಿಎಂ ವಿಚಾರದಲ್ಲಿ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದ್ರು.
ಈಗ ಮಾಡಿರುವ ಸಭೆಗೆ ಯಾವುದೇ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ.., ಇನ್ನು ಮುಂದೆ ಈ ರೀತಿಯ ಸಭೆಗಳನ್ನೇ ನಡೆಸೋದಿಲ್ಲ ಎಂದು ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ