*ಕೆಪಿಸಿಸಿ ಅಧ್ಯಕ್ಷರ ವಿರುದ್ಧವೇ ಮತ್ತೆ ನಾಲಗೆ ಹರಿಬಿಟ್ಟ ಸಚಿವ ರಾಜಣ್ಣ* *ಡಿ.ಕೆ.ಶಿವಕುಮಾರ ಎಐಸಿಸಿ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ*

ಪ್ರಗತಿವಾಹಿನಿ ಸುದ್ದಿ : ಸಹಕಾರ ಸಚಿವ ಕೆ.ಎನ್. ರಾಜಣ್ಣ ಮತ್ತೆ ಕೆಪಿಸಿಸಿ ಅಧ್ಯಕ್ಷರ ವಿರುದ್ಧವೇ ನಾಲಗೆ ಹರಿಬಿಟ್ಟಿದ್ದಾರೆ.
ಉಪಮುಖ್ಯಮಂತ್ರಿಯೂ ಆಗಿರುವ ಡಿ.ಕೆ.ಶಿವಕುಮಾರ ಪದೇ ಪದೆ ಎಐಸಿಸಿ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ರಾಜಣ್ಣ ನೇರವಾಗಿ ಹೇಳಿದ್ದಾರೆ. ನಾನು ಹೇಳುತ್ತಿರುವುದು ಆರೋಪವಲ್ಲ, ವಾಸ್ತವ ಎಂದೂ ಹೇಳಿದ್ದಾರೆ.
ಸಿದ್ದರಾಮಯ್ಯ ಹೆಸರನ್ನು ಯಾರೂ ದುರ್ಬಳಕೆ ಮಾಡಿಕೊಳ್ಳಬಾರದು. ಸಿದ್ದರಾಮಯ್ಯ ನಮ್ಮೆಲ್ಲರ ನಾಯಕ ಎನ್ನುವ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು, ಡಿಕೆಶಿ ಪದೇ ಪದೆ ಮಾತೆತ್ತಿದರೆ ಎಐಸಿಸಿಯವರು ಹೇಳಿದ್ದಾರೆ ಎನ್ನುತ್ತ ಎಐಸಿಸಿ ಹೆಸರು ದುರ್ಬಳಕೆ ಮಾಡಿಕೊಳ್ಳಬಾರದು. ಎಐಸಿಸಿಯವರೇನು ಪದೆ ಪದೆ ಹೇಳಲು ಬರುತ್ತಾರಾ. ಇವರೇನೋ ಹೇಳುತ್ತಾರೆ, ಅದಕ್ಕೆ ಅವರೇನೂ ಹೇಳುತ್ತಾರೆ ಎಂದು ರಾಜಣ್ಣ ಹೇಳಿದರು.
ನೀವು ಇಂತಹ ಹೆಳಿಕೆ ಮೂಲಕ ಪಕ್ಷಧ ಶಿಸ್ತನ್ನು ಉಲ್ಲಂಘಿಸುತ್ತಿಲ್ಲವೇ, ನಿಮ್ಮ ಮಾತಿನಿಂದ ಪಕ್ಷ ದುರ್ಬಲವಾಗುತ್ತದೆ, ಸರಕಾರ ಅಭದ್ರವಾಗುತ್ತದೆ ಅಲ್ಲವೇ ಎನ್ನುವ ಪ್ರಶ್ನೆಗೆ, ನಾನು ಸತ್ಪರಿಣಾಮ ಬೀರುವ ಅಂಶಗಳನ್ನು ಹೇಳುತ್ತೇನೆ. ದುಷ್ಪರಿಣಾಮ ಬೀರುವ ವಿಷಯಗಳನ್ನು ಮಾತನಾಡುವುದಿಲ್ಲ. ಪಕ್ಷವನ್ನು ಶಕ್ತಿಹೀನ ಮಾಡುವ ಸರಕಾರವನ್ನು ಅಭದ್ರ ಮಾಡಬೇಕೆನ್ನುವ ಉದ್ದೇಶ ಇಲ್ಲ ಎಂದೂ ಅವರ ಹೇಳಿದ್ದಾರೆ.
ಬೇರೆ ಸಚಿವರಿಗಿಂತ ನೀವೇ ಪದೆ ಪದೆ ಡಿ.ಕೆ.ಶಿವಕುಮಾರ ಕುರಿತು ಮಾತನಾಡುತ್ತಿದ್ದೀರಿ, ವಯಕ್ತಿಕವಾಗಿ ಅವರ ಬಗ್ಗೆ ಏಕೆ ಹೀಗೆ ಎಂದು ಪ್ರಶ್ನಿಸಿದಾಗ, ವಯಕ್ತಿಕವಾಗಿ ನನಗೆ ಡಿ.ಕೆ.ಶಿವಕುಮಾರ ಮೇಲೆ ನನಗೆ ಯಾವ ಅಸಮಾಧಾನವೂ ಇಲ್ಲ. ಕೆಲವೊಂದು ವಿಷಯದಲ್ಲಿ ಭಿನ್ನಾಭಿಪ್ರಾಯ ಬಂದಾಗ ನಾನು ವಯಕ್ತಿಕ ಅಭಿಪ್ರಾಯ ಹೇಳುತ್ತೇನೆ ಎಂದಿದ್ದಾರೆ.
ಸಿದ್ದರಾಮಯ್ಯ ಉತ್ತಮ ನಾಯಕ. ಪ್ರಶ್ನೆಯೇ ಇಲ್ಲ. ಎರಡನೇ ಬಾರಿ ಅವರು ಮುಖ್ಯಮಂತ್ರಿಯಾಗಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ