Belagavi NewsBelgaum NewsPolitics

*ಶಾಸಕ ಮುನಿರತ್ನ ವಿರುದ್ಧ ವಾಗ್ದಾಳಿ ನಡೆಸಿದ ಸಚಿವ ಸತೀಶ್ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ: ಬಿಜೆಪಿ ಶಾಸಕ ಮುನಿರತ್ನ ಅವರಿಗೆ ಬಾಯಿಗೆ ಬಂದ ಹಾಗೇ ಮಾತನಾಡುವಂತೆ ನಾವು ಹೇಳಿದ್ದಾ? ಮಾಡೋದೆಲ್ಲಾ ಮಾಡಿ ಈಗ ನಾನು ಮಾಡಿಲ್ಲ ಅಂದರೆ ಹೇಗೆ? ಎಂದು ಸಚಿವ ಸತೀಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ.

ಬೆಳಗಾವಿ ಸುವರ್ಣ ಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವ ಎಲ್ಲರಿಗೂ ಸಿಕ್ಕಾಗ ಮಾತ್ರ ಸ್ವಾತಂತ್ರಕ್ಕೆ ಅರ್ಥ ಬರುತ್ತದೆ ಎಂದರು. ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಹಮ್ಮಿಕೊಂಡ ಮಾನವ ಸರಪಳಿ ಕಾರ್ಯಕ್ರಮ ಇದು ಐತಿಹಾಸಿಕ ಕಾರ್ಯಕ್ರಮ, ದೇಶದಲ್ಲಿ ಮೊಟ್ಟ ಮೊದಲು ಮಾನವ ಸರಪಳಿ ಮುಖಾಂತರ ಪ್ರಜಾಪ್ರಭುತ್ವ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ಸತೀಶ್ ಹೇಳಿದರು.

ಹಾಗೆಯೇ ಮುನಿರತ್ನ ಕುರಿತು ಮಾತನಾಡಿದ ಜಾರಕಿಹೊಳಿ, ಅವರಿಗೆ ಕಾಂಗ್ರೆಸ್ ನವರು, ಬಿಜೆಪಿಯವರು, ಜೆಡಿಎಸ್ ನವರು ಹೇಳಿದ್ರಾ ಬೈಯ್ಯುವಂತೆ? ತರಾತುರಿಯಲ್ಲಿ ಅವರನ್ನು ಬಂಧಿಸಿಲ್ಲ, ಆಡಿಯೋದಲ್ಲಿ ಆಡಿರುವ ಮಾತು ಬಹಿರಂಗವಾಗಿದೆ. ಬಾಯಿಗೆ ಬಂದಂತೆ ಮಾತನಾಡಿ ನಾನು ಮಾತನಾಡಿಲ್ಲಅಂತಾ ಹೇಳುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾಮಮಂಗಲ ಗಲಾಟೆ ಪ್ರಸ್ತಾಪಿಸಿದ ಅವರು, ರಾಜ್ಯದಲ್ಲಿ ಅರವತ್ತು ಸಾವಿರ ಗಣಪತಿ ಇದಾವೆ. ಪ್ರಧಾನಿ ನರೇಂದ್ರ ಮೋದಿ ಅವರು ನಾಗಮಂಗಲ ಗಲಾಟೆಯನ್ನು ಪ್ರಸ್ತಾಪಿಸುವುದು ಸರಿಯಲ್ಲ ರಾಜ್ಯದಲ್ಲಿ ಎಲ್ಲೋ ಒಂದು ಆಕಸ್ಮಿಕ ಘಟನೆ ಆಗಿರಬಹುದು, ಪೊಲೀಸರು ಅದನ್ನ ನೋಡಿಕೊಳ್ತಾರೆ. ಅದನ್ಯಾಕೆ ಅಷ್ಟು ಸೀರಿಯಸ್ ಆಗ ತಗೋಬೇಕು ಎಂದುರು.

Home add -Advt

Related Articles

Back to top button