Kannada NewsKarnataka News

ನಾಳೆ ಬೆಳಗಾವಿಯಲ್ಲಿ ‘ಶಕ್ತಿ ಯೋಜನೆ’ಗೆ ಸಚಿವ ಸತೀಶ ಜಾರಕಿಹೊಳಿ ಚಾಲನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಾಂಗ್ರೆಸ್​ ಸರ್ಕಾರ ಮಹತ್ವದ 5 ಉಚಿತ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ “ಶಕ್ತಿ ಯೋಜನೆ”ಗೆ ನಾಳೆ ಬೆಳಗ್ಗೆ 12 ಗಂಟೆಗೆ ಬೆಳಗಾವಿ  ಕೇಂದ್ರ ಬಸ್‌ ನಿಲ್ದಾಣದಲ್ಲಿ ಲೋಕೋಪಯೋಗಿ ಸಚಿವ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ಅವರು ಚಾಲನೆ ನೀಡಲಿದ್ದಾರೆ.

Home add -Advt

ಮುಖ್ಯ ಅತಿಥಿಯಾಗಿ  ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅಗಮಿಸಲಿದ್ದಾರೆ. ಉತ್ತರ ಶಾಸಕ  ಆಸೀಫ್‌ (ರಾಜು) ಸೇಠ್‌ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಉತ್ತರ ಕನ್ನಡ  ಸಂಸದ ಅನಂತಕುಮಾರ ಹೆಗಡೆ, ಚಿಕ್ಕೊಡಿ ಸಂಸದ ಅಣ್ಣಾಸಾಹೇಬ್‌ ಜೊಲ್ಲೆ, ರಾಜ್ಯಸಭೆ ಸಂಸದ ಈರಣ್ಣಾ ಕಡಾಡಿ, ಬೆಳಗಾವಿ ಸಂಸದೆ ಮಂಗಲ ಸುರೇಶ ಅಂಗಡಿ ಆಗಮಿಸಲಿದ್ದಾರೆ.

ನಾಳೆ ನಡೆಯುವ “ಶಕ್ತಿ ಯೋಜನೆ ಕಾರ್ಯಕ್ರಮದಲ್ಲಿ ಪ್ರಾದೇಶಿಕ ಆಯುಕ್ತ ಪಿ. ಸುನೀಲ್‌  ಕುಮಾರ್‌,  ಉತ್ತರ ವಲಯ ಆರಕ್ಷಕ ಮಹಾನಿರೀಕ್ಷಕ ಎನ್‌. ಸತೀಶಕುಮಾರ್‌,  ಜಿಲ್ಲಾಧಿಕಾರಿ‌ ನಿತೇಶ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಢಾಧಿಕಾರಿ ಡಾ. ಸಂಜೀವ ಪಾಟೀಲ, ಹುಬ್ಬಳ್ಳಿ ವಾಕರಸಾ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಭರತ್‌ ಎಸ್‌,  ಬೆಳಗಾವಿ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಗಣೇಶ ರಾಠೋಡ್, ಜಿಪಂ ಸಿಇಓ ಹರ್ಷಲ್‌ ಭೋಯರ್‌, ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು‌ ಹಾಗೂ ಬೆಳಗಾವಿ ವಾ.ಕ.ರ.ಸಾ. ಸಂಸ್ಥೆ ಆಡಳಿತ ಮಂಡಳಿ, ಸಿಬ್ಬಂದಿ ವರ್ಗ ಭಾಗವಹಿಸಿಲಿದ್ದಾರೆ.

Related Articles

Back to top button