ವಡೋದರಾ ರೈಲ್ವೆ ನಿಲ್ಧಾಣಕ್ಕೆ ಹಠಾತ್ ಭೇಟಿ ನೀಡಿದ ಸಚಿವ ಅಂಗಡಿ

ಪ್ರಗತಿವಾಹಿನಿ ಸುದ್ದಿ, ವಡೋದರ – ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಬುಧವಾರ ರಾತ್ರಿ ಗುಜರಾತಿನ ವಡೋದರಾ ರೈಲ್ವೆ ನಿಲ್ದಾಣಕ್ಕೆ ಹಠಾತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೋಚ್, ಪ್ಲ್ಯಾಟ್ ಫಾರ್ಮ್ ಮೊದಲಾದವುಗಳನ್ನು ತಪಾಸಣೆ ನಡೆಸಿದ ಅಂಗಡಿ, ಅಲ್ಲಿದ್ದ ರೈಲ್ವೆ ಪ್ರಯಾಣಿಕರೊಂದಿಗೆ ಸಂವಾದ ನಡೆಸಿದರು. ಜೊತೆಗೆ ರೈಲ್ವೆ ಸಿಬ್ಬಂದಿ ಜೊತೆಗೂ ಚರ್ಚಿಸಿದರು.
 ರೈಲ್ವೆ ವ್ಯವಸ್ಥೆಯಲ್ಲಿನ ನೂನ್ಯತೆಗಳ ಮತ್ತು ಸುಧಾರಣೆಗೆ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಪ್ರಯಾಣಿಕರಿಂದ ಮಾಹಿತಿ ಪಡೆದರು.
ಸುರೇಶ ಅಂಗಡಿ ರೈಲ್ವೆ ಸಚಿವರಾದ ನಂತರ ರಾಷ್ಟ್ರದ ಹಲವು ರೈಲ್ವೆ ನಿಲ್ದಾಣಗಳಿಗೆ ಹಠಾತ್ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ರೈಲ್ವೆ ವ್ಯವಸ್ಥೆಯಲ್ಲಿನ ಲೋಪಗಳ ಮಾಹಿತಿ ಪಡೆದು, ಸುಧಾರಣೆಗೆ ಕೈಗೊಳ್ಳಬಹುದಾದ ಕ್ರಮಗಳ ಅಧ್ಯಯನ ನಡೆಸುತ್ತಿದ್ದಾರೆ.

 

 

Related Articles

Back to top button