ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕರು ಸೇರಿದಂತೆ ಎಲ್ಲಾ 224 ಶಾಸಕರ ವಿರುದ್ಧವೂ ತನಿಖೆಯಾಗಲಿ ಎಂದು ಸವಾಲು ಹಾಕಿದ್ದ ಸಚಿವ ಡಾ.ಕೆ.ಸುಧಾಕರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸುಧಾಕರ್ ಅವರು ರಾಜ್ಯಕ್ಕೆ ನುಡಿಮುತ್ತುಗಳನ್ನು ನೀಡುತ್ತಿದ್ದಾರೆ. ತುಂಬಾ ಸಂತೋಷ ಎಂದು ಹೇಳಿದರು.
ಸುಧಾಕರ್ ಅಲ್ಲ, ಯಾರು ಏನೇ ಹೇಳಲಿ. ನನಗಿರುವುದು ಒಬ್ಬಳೇ ಹೆಂಡತಿ. ಒಂದೇ ಸಂಸಾರ. ಉಳಿದ ವಿಚಾರವನ್ನು ಸದನದ ಒಳಗೇ ಚರ್ಚೆ ಮಾಡುತ್ತೇವೆ. ಯಾಕೆಂದರೆ ಇದು ಸಾಮೂಹಿಕ ವಿಚಾರವಾಗಿರುವುದರಿಂದ ಅಸೆಂಬ್ಲಿಯಲ್ಲಿಯೇ ಚಿರ್ಚಿಸಬೇಕು ಎಂದರು.
ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದ ಸಚಿವ ಡಾ.ಕೆ.ಸುಧಾಕರ್, ಸಿದ್ದರಾಮಯ್ಯ, ಡಿಕೆಶಿ, ಕುಮಾರಣ್ಣ, ರಮೇಶ್ ಕುಮಾರ್ ಸತ್ಯಹರಿಶ್ಚಂದ್ರರಾ? ಇವರೆಲ್ಲ ಏಕಪತ್ನಿ ವ್ರತ ಮಾಡುತ್ತಿದ್ದಾರಾ? ಯಾರು ಯಾರು ಸಿಎಂ ಆಗಿದ್ದಾಗ ಏನು ಮಾಡಿದರು? ಇವರು ಮಾತ್ರವಲ್ಲ 224 ಶಾಸಕರ ವಿರುದ್ಧವೂ ತನಿಖೆಯಾಗಲಿ ಎಂದು ನಾನು ಸವಾಲು ಹಾಕುತ್ತೇನೆ ಎಂದಿದ್ದರು.
224 ಶಾಸಕರ ಏಕಪತ್ನಿ ವ್ರತ ತನಿಖೆಯಾಗಲಿ: ಸುಧಾಕರ ಓಪನ್ ಚಾಲೇಂಜ್
ಬೆಂಕಿ ಹೊತ್ತಿಸಿದ ಸುಧಾಕರ್ ಏಕಪತ್ನಿ ವ್ರತ ಹೇಳಿಕೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ