ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ: ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ಸಂಕೇಶ್ವರ ಪಟ್ಟಣದ ಖಾಸಗಿ ಸಂಸ್ಥೆಗೆ ಸೇರಿದ ಪ್ರೌಢ ಶಾಲಾ ಶಿಕ್ಷಕನ ವಿರುದ್ಧ ಪೋಕ್ಸೊ ಕಾಯಿದೆಯಡಿ ಕೇಸ್ ದಾಖಲಿಸಲಾಗಿದೆ.
ಪಟ್ಟಣದ ಖಾಸಗಿ ಪ್ರೌಢ ಶಾಲೆಯ ಕನ್ನಡ ಮಾಧ್ಯಮದ ಶಿಕ್ಷಕ ಬಿ.ಆರ್. ಬಾಡಕರ 10ನೇ ತರಗತಿಯ ವಿದ್ಯಾರ್ಥಿನಿಯರ ಮೈ, ಕೈ ಮುಟ್ಟಿ ಅಸಭ್ಯವಾಗಿ ವರ್ತಿಸುತ್ತಿದ್ದ ಎಂಬ ಕಾರಣಕ್ಕೆ ವಿದ್ಯಾರ್ಥಿನಿಯೊಬ್ಬಳು ಡಿ.23 ರಂದು ಶಿಕ್ಷಕನ ವಿರುದ್ಧ ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಈ ಶಿಕ್ಷಕನಿಗೆ ಸಹಕರಿಸುತ್ತಿದ್ದ ಎಂಬ ಕಾರಣಕ್ಕೆ ಇನ್ನೊಬ್ಬ ಶಿಕ್ಷಕನ ಹೆಸರನ್ನೂ ದೂರಿನಲ್ಲಿ ಸೇರಿಸಲಾಗಿತ್ತು.
ಕೆಲ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಬಾಡಕರ ಯಾರಿಗಾದರೂ ವಿಷಯ ತಿಳಿಸಿದರೆ ಇಂಟರ್ನಲ್ ಮಾರ್ಕ್ಸ್ ಕಡಿತಗೊಳಿಸುವುದಾಗಿ ಬೆದರಿಕೆಯೊಡ್ಡುತ್ತಿದ್ದ ಎಂದು ವಿದ್ಯಾರ್ಥಿನಿ ದೂರಿನಲ್ಲಿ ತಿಳಿಸಿದ್ದಾಳೆ.
ಈ ಹಿನ್ನೆಲೆಯಲ್ಲಿ ಆರೋಪಿಗಳವಿರುದ್ಧ IPC ಕಲಂ 354 (A), 109, 506 ಅಡಿಯಲ್ಲಿ, ಪೋಕ್ಸೋ (POCSO Act) ಹಾಗೂ ಎಸ್ ಸಿ/ ಎಸ್ ಟಿ (ದೌರ್ಜನ್ಯ ತಡೆ) ಕಾಯ್ದೆ-2015ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಸಂಕೇಶ್ವರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
*ಎಲ್ಲರೂ ಮಾಸ್ಕ್ ಧರಿಸಿ; ಆರೋಗ್ಯ ಸಚಿವ ಡಾ.ಸುಧಾಕರ್ ಖಡಕ್ ಸೂಚನೆ*
https://pragati.taskdun.com/covid-increasemaskdr-sudhakarbelagavi/
ಚಳಿಯ ಹೊಡೆತಕ್ಕೆ ನಡುಗುತ್ತಿದೆ ಅಮೆರಿಕ; ಹವಾಮಾನ ವೈಪರೀತ್ಯಕ್ಕೆ 31ಕ್ಕೂ ಹೆಚ್ಚು ಬಲಿ
https://pragati.taskdun.com/america-is-shivering-in-the-cold-more-than-31-dies-of-extreme-weather/
*ಚೀನಾದಿಂದ ಬಂದ ವ್ಯಕ್ತಿ ಸೇರಿ 9 ಪ್ರಯಾಣಿಕರಿಗೆ ಕೊರೊನಾ ದೃಢ*
https://pragati.taskdun.com/karnataka-covid-casebf-7bangalore9-peoplecovid-positevebf-7/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ