Kannada NewsKarnataka NewsNational

*ಎಣ್ಣೆ ಏಟಲ್ಲಿ ರೈಲಿನ ಚೈನ್ ಎಳೆದ ಕಿಡಿಗೇಡಿಗಳು*

ಪ್ರಗತಿವಾಹಿನಿ ಸುದ್ದಿ : ಕುಡಿದ ಮತ್ತಿನಲ್ಲಿದ್ದ ಮೂವರು ಕಿಡಿಗೇಡಿಗಳು ಬೆಂಗಳೂರಿನಿಂದ ಗೋವಾಗೆ ಹೊರಟಿದ್ದ ಯಶವಂತಪುರ-ವಾಸ್ಕೋಡಗಾಮ ರೈಲಿನ ಚೈನ್ ಎಳೆದಿದ್ದಾರೆ. ಇದನ್ನು ಗಮನಿಸಿದ ಆರ್‌ಪಿಎಫ್ ಸಿಬ್ಬಂದಿ ಪ್ರಶ್ನೆ ಮಾಡಿದರು. ಈ ವೇಳೆ ಪುಂಡರು ಆರ್‌ಪಿಎಫ್ ಸಿಬ್ಬಂದಿಯನ್ನು ತಳ್ಳಿ, ಹಲ್ಲೆ ಮಾಡಿದ್ದಾರೆ.

ಕೂಡಲೇ ಹೆಚ್ಚಿನ ಆರ್‌ಪಿಎಫ್ ಸಿಬ್ಬಂದಿ ಸ್ಥಳಕ್ಕೆ ಬಂದು ಮೂವರು ಕಿಡಿಗೇಡಿಗಳನ್ನು ವಶಕ್ಕೆ ಪಡೆದಿದ್ದಾರೆ. ಯಶವಂತಪುರ ರೈಲ್ವೆ ಠಾಣೆಯಲ್ಲಿ ಆರ್‌ಪಿಎಫ್ ಸಿಬ್ಬಂದಿ ಆರೋಪಿಗಳ ವಿರುದ್ಧ ದೂರು ನೀಡಿದ್ದಾರೆ.

ರೈಲಿನ ಚೈನ್ ಎಳೆದು, ರೈಲ್ವೆ ಪೊಲೀಸರ ಮೇಲೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಮೂವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಪುಂಡರ ಗಲಾಟೆಯಿಂದಾಗಿ ಸ್ವಲ್ಪ ತಡವಾಗಿ ವಾಸ್ಕೋಡ ಗಾಮಾ ಟ್ರೈನ್ ಹೊರಟಿದೆ.

ಮೂವರು ಕಿಡಿಗೇಡಿಗಳು ಗಲಾಟೆ ಮಾಡಿದ್ದಕ್ಕೆ ಬೋಗಿಯೊಳಗೆ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು. ಇತರೆ ಪ್ರಯಾಣಿಕರು ಬೆಚ್ಚಿಬಿದ್ದಿದ್ದರು. ತಕ್ಷಣವೇ ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದಾರೆ.

Home add -Advt

Related Articles

Back to top button