ಪ್ರಗತಿವಾಹಿನಿ ಸುದ್ದಿ, ಚೆನ್ನೈ: ಒಡಿಶಾದಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತ ನೂರಾರು ಜನರ ಬಲಿ ತೆಗೆದುಕೊಂಡಿರುವ ಘಟನೆ ಇನ್ನೂ ಹಸಿಹಸಿಯಾಗಿರುವಾಗಲೇ ತಮಿಳುನಾಡಿನಲ್ಲಿ ಭಾರೀ ರೈಲು ದುರಂತವೊಂದು ಲೋಕೋ ಪೈಲಟ್ ಗಳ ಸಮಯ ಪ್ರಜ್ಞೆಯಿಂದ ತಪ್ಪಿದೆ.
ತಿರುಚ್ಚಿ ಬಳಿ ರೈಲು ಹಳಿ ಮೇಲೆ ಕೆಲ ಕಿಡಿಗೇಡಿಗಳು ಎರಡು ಲಾರಿಗಳ ಟೈರ್ ಗಳನ್ನು ಇಟ್ಟಿದ್ದರು. ರಾತ್ರಿ 12.30ರ ಸುಮಾರಿಗೆ ತಿರುಚ್ಚಿ ಜಂಕ್ಷನ್ ನಿಂದ ವೇಗದಲ್ಲಿ ಬಂದ ಕನ್ಯಾಕುಮಾರಿ-ಚೆನ್ನೈ ಎಗ್ಮೋರ್ ಎಕ್ಸ್‌ಪ್ರೆಸ್ ಹಳಿಯಲ್ಲಿ ಟೈರ್ ಇರುವುದನ್ನು ದೂರದಿಂದಲೇ ಗಮನಿಸಿದ ಲೋಕೋ ಪೈಲಟ್ ರಘುರಾಮನ್ ಹಾಗೂ ಸಹಾಯಕ ಲೋಕೋ ಪೈಲಟ್ ವಿನೋದ್ ಕೂಡಲೆ ರೈಲಿನ ವೇಗ ತಗ್ಗಿಸಿದ್ದಾರೆ. ರೈಲು ಟೈರ್ ಬಳಿ ತಲುಪುವ ವೇಳೆ ಅದರ ವೇಗ ಗಣನೀಯವಾಗಿ ಇಳಿದಿದ್ದು ಟೈರ್ ಗೆ ಡಿಕ್ಕಿ ಹೊಡೆದರೂ ಗಂಭೀರ ಪರಿಣಾಮ ಆಗಲಿಲ್ಲ. ಇದರಲ್ಲಿ ಒಂದು ಟೈರ್ ಎಂಜಿನ್ ಗೆ ಸಿಲುಕಿಕೊಂಡಿತ್ತು. ಕೂಡಲೆ ಅವರು ರೈಲ್ವೆ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಘಟನೆಯಿಂದ ರೈಲು ಸುಮಾರು 25 ನಿಮಿಷ ಅದೇ ಸ್ಥಳದಲ್ಲಿ ನಿಲ್ಲಬೇಕಾಗಿ ಬಂತು. ಈ ಕುರಿತು ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಿಡಿಗೇಡಿಗಳಿಗಾಗಿ ಶೋಧ ನಡೆಸಿದ್ದಾರೆ.
https://pragati.taskdun.com/rajasthan-cm-ashok-gehlot-grabbed-a-non-working-mic-and-threw-it-at-the-collector/
https://pragati.taskdun.com/s-r-bommai-birth-centenary-celebration-on-june-6/
https://pragati.taskdun.com/bescomfake-job-offeraccused-arrested/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ