
ಪ್ರಗತಿವಾಹಿನಿ ಸುದ್ದಿ: ಒಂಟೆಗಳನ್ನು ಹುಡುಕುತ್ತಾ ಹೊರಟಿದ್ದ ಮೂವರು ಮಕ್ಕಳು ಯುಜಿಡಿ ತ್ಯಾಜ್ಯ ನೀರಿನ ಘಟಕದಲ್ಲಿ ಬಿದ್ದು ಶವವಾಗಿ ಪತ್ತೆಯಾಗಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.
9 ವರ್ಷದ ಅನುಷಾ ಅನೀಲ ದಹಿಂಡೆ, 7 ವರ್ಷದ ವಿಜಯ ಅನಿಲ ದಹಿಂಡೆ ಹಾಗೂ 7 ವರ್ಷದ ಮಿಹಿರ್ ಶ್ರೀಕಾಂತ್ ಮೃತ ಮಕ್ಕಳು. ಗದಗ ಮೂಲದ ಅನುಷಾ, ವಿಜಯ ಬೇಸಿಗೆ ರಜೆಗೆಂದು ವಿಜಯಪುರದ ತನ್ನ ಮಾವನ ಮನೆಗೆ ಬಂದಿದ್ದರು. ನಿನ್ನೆ ಬೆಳಿಗ್ಗೆ 10 ಗಂಟೆ ಸುಮಾರಿಗೆ ಚಾಬಕಸಾಬ್ ದರ್ಗಾ ಬಳಿ ಮನೆ ಮುಂದೆ ಒಂಟೆಗಳು ಬಂದಿದ್ದವು. ಈ ವೇಳೆ ಮೂವರು ಮಕ್ಕಳು ಒಂಟೆ ಸವಾರಿ ಮಾಡಿದ್ದಾರೆ. ಬಳಿಕ ತೆರಳಿದ ಒಂಟೆಗಳನ್ನು ಹುಡುಕುತ್ತಾ ಮೂವರು ಮಕ್ಕಳು ಮನೆಯಿಂದ ಹೊರಟಿದ್ದಾರೆ.
ಮಕ್ಕಳು ಆಟವಾಡುತ್ತಿರಬಹುದು ಎಂದು ಮನೆಯವರು ಭಾವಿಸಿದ್ದರು. ಆದರೆ ರಾತ್ರಿಯಾದರೂ ಮಕ್ಕಳ ಸುಳಿವಿಲ್ಲದಿದ್ದಾಗ ಗಾಬರಿಯಾದ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಸಿಸಿಟಿವಿ ಪರಿಶೀಲಿಸಿದಾಗ ಮಕ್ಕಳು ರಸ್ತೆಯಲ್ಲಿ ಹೋಗುತ್ತಿರುವ ದುಶ್ಯಗಳು ಕಂಡುಬಂದಿವೆ.
ಪೊಲೀಸರು ಹುಡುಕಾಟ ನಡೆಸಿದಾಗ ಇಂದು ಮೂವರು ಮಕ್ಕಳು ಯುಜಿಡಿ ತ್ಯಾಜ್ಯದ ನೀರಿನ ಸಂಸ್ಕರಣಾ ಘಟದ ನೀರಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಘಟಕದ ಬಳಿ ಸಾರ್ವಜನಿಕರಿಗೆ ಪ್ರವೇಶವಿಲ್ಲದಿದ್ದರೂ ಮಕ್ಕಳು ಈ ಸ್ಥಳಕ್ಕೆ ಬಂದಿದ್ದಾರೂ ಹೇಗೆ? ಘಟಕದ ಅಧಿಕಾರಿಗಳ ಬೇಜವಾಬ್ದಾರಿಯೇ ಮಕ್ಕಳ ಸಾವಿಗೆ ಕರಣ ಎಂದು ಪೋಷಕರು ಯುಜಿಡಿ ಘಟದ ಬಳಿ ಪ್ರತಿಭಟನೆ ನಡೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ