Kannada NewsLatest

ರಾಯಬಾಗ ಬಳಿ ಬಾಲಕಿಯರು ಪತ್ತೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಬೆಳಗಾವಿಯ ಗುರುಪ್ರಸಾದ ನಗರದಿಂದ ಕಾಣೆಯಾಗಿದ್ದ ಇಬ್ಬರು ವಿದ್ಯಾರ್ಥಿನಿಯರು  ರಾಯಬಾಗ ಬಳಿ ಪತ್ತೆಯಾಗಿದ್ದು, ಅವರನ್ನು ವಾಪಸ್ ಕರೆತರಲಾಗುತ್ತಿದೆ. 

Related Articles

ಅಮೃತ ವಿದ್ಯಾಲಯದಲ್ಲಿ 9 ನೇ ವರ್ಗದಲ್ಲಿ ಓದುತ್ತಿರುವ ಶರಣ್ಯ ಮಲಕಣ್ಣವರ( 15) ಮತ್ತು ಕಾವ್ಯಾ ಖಂಡಪ್(15) ನಾಪತ್ತೆಯಾಗಿದ್ದರು. 

ವ್ಯಕ್ತಿಯೊಬ್ಬರು ಬಾಲಕಿಯರನ್ನು ಪತ್ತೆ ಮಾಡಿ ಅವರನ್ನು ಬೆಳಗಾವಿಗೆ ಕರೆದುಕೊಂಡು ಬರುತ್ತಿದ್ದಾರೆ ಎಂದು ಶರಣ್ಯ ಸಂಬಂಧಿ ಪ್ರವೀಣ ಮಲಕಣ್ಣವರ್ ಪ್ರಗತಿವಾಹಿನಿಗೆ ತಿಳಿಸಿದ್ದಾರೆ. 

Home add -Advt

ಈ ಸಂಬಂಧ ಬೆಳಗಾವಿಯ ಗ್ರಾಮೀಣ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು

ಬಾಲಕಿಯರು ಹೇಗೆ ರಾಯಬಾಗ ತಲುಪಿದರು? ಹೇಗೆ ಪತ್ತೆಯಾದರು ಎನ್ನುವ ಯಾವ ಮಾಹಿತಿಯೂ ಇನ್ನೂ ಸಿಕ್ಕಿಲ್ಲ. ನಾನು ಬಾಲಕಿಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದೇನೆ. ಆಕೆ ಅಳುತ್ತಿದ್ದಾಳೆ. ಬೆಳಗಾವಿಗೆ ತಲುಪಿದ ನಂತರ ವಿವರ ತಿಳಿಯಬೇಕಿದೆ ಎಂದು ಪ್ರವೀಣ ತಿಳಿಸಿದರು. 

ಬೆಳಗಾವಿಯ ಇಬ್ಬರು ವಿದ್ಯಾರ್ಥಿನಿಯರು ನಾಪತ್ತೆ

 

Related Articles

Back to top button