

ಪ್ರಗತಿವಾಹಿನಿ ಸುದ್ದಿ, ಅಗಸಗಿ :
ಬೆಳಗಾವಿ ತಾಲೂಕಿನ ಚಲವೇನಹಟ್ಟಿ ಗ್ರಾಮದ ಯುವಕ ಗಜಾನನ ಬೈರು ಪಾಟೀಲ ( 24 ) ಕಾಣೆಯಾಗಿ 2 ತಿಂಗಳ ನಂತರ ಅಲತಗಾ-ಖಡಿಮಿಶನ್ ಗ್ರಾಮದ ಹತ್ತಿರ ಕಲ್ಲು ಗಣಿಗಾರಿಕೆಯಿಂದಾಗಿ ತಯಾರಾದ ದೊಡ್ಡ ಹೊಂಡದಲ್ಲಿ ತುಂಬಿರುವ ನೀರಿನಲ್ಲಿ ತೇಲಾಡುವ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.
ಶವ ಕೊಳೆಯುವ ಸ್ಥಿತಿಯಲ್ಲಿ ಸಿಕ್ಕಿದ್ದು, ಮೂರ್ನಾಲ್ಕು ದಿನಗಳ ಹಿಂದೆ ನೀರಿಲ್ಲಿ ಬಿದ್ದಿರುವುದಾಗಿ ಊಹಿಸಲಾಗಿದೆ.
ಮೃತ ಗಜಾನನ ಪದವಿ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿ ಬೆಳಗಾವಿ, ಮಹಾರಾಷ್ಟ್ರದ ಲಾಜ್ಡ್ ಮತ್ತು ಹೋಟೆಲಗಳಲ್ಲಿ ಕಳೆದ 4 ವರ್ಷಗಳಿಂದ ರೂಮ್ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಆತನ ಮಾನಸಿಕ ಸ್ಥಿತಿ ಸರಿಯಾಗಿರದ ಕಾರಣ ಮೇಲಿಂದ ಮೇಲೆ ಹೇಳದೆ ಕೇಳದೆ ಮನೆ ಬಿಟ್ಟು ಹೋಗುತ್ತಿದ್ದಿದ್ದಾಗಿ ಆತನ ತಂದೆ ಪೋಲಿಸರಿಗೆ ತಿಳಿಸಿದ್ದಾರೆ. ಎರಡು ತಿಂಗಳ ಹಿಂದೆ ಮನೆ ಬಿಟ್ಟು ಹೊಗಿದ್ದಾತ ಮರಳಿ ಬರಬಹುದೆಂದು ತಿಳಿದು ಕಾಣೆಯಾದ ಬಗ್ಗೆ ದೂರು ನೀಡದಿರುವುದಾಗಿ ಆತನ ತಂದೆ ತಿಳಿಸಿದ್ದಾರೆ.
ಈ ಘಟನೆ ಕುರಿತು ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಶ್ರೀಶೈಲ ಕೌಜಲಗಿ ನೇತೃತ್ವದಲ್ಲಿ ಯುವಕನ ಸಾವು ಕೊಲೆಯೋ ಅಥವಾ ಆತ್ಮಹತ್ಯೆಯೋ ಎನ್ನುವುದರ ಬಗ್ಗೆ ತನಿಖೆ ಮುಂದುವರೆದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ