Karnataka News

*ಮೀಟರ್ ಬಡ್ಡಿ ದಂಧೆಕೋರರ ಅಟ್ಟಹಾಸ: ಬಡ್ಡಿ ಹಣ ನೀಡದ್ದಕ್ಕೆ ವ್ಯಕ್ತಿಯನ್ನು ಬೆತ್ತೆಲೆಗೊಳಿ ಮನಬಂದಂತೆ ಥಳಿಸಿದ ಗ್ಯಾಂಗ್*

ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಮೀಟರ್ ಬಡ್ಡಿ ದಂಧೆಕೋರರ ಹಾವಳಿ, ಮೈಕ್ರೋ ಫೈನಾನ್ಸ್ ಕಿರುಕುಳ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇಲ್ಲೋರ್ವ ವ್ಯಕ್ತಿಯನ್ನು ಬೆತ್ತಲೆಗೊಳಿಸಿ ಮನಬಮ್ದಂತೆ ಥಳಿಸಿರುವ ಅಮಾನವೀಯ ಘಟನೆ ನಡೆದಿದೆ.

ಗದಗ ಜಿಲ್ಲೆಯಲ್ಲಿ ಮೀಟರ್ ಬಡ್ಡಿ ದಂಧೆಕೋರರ ಕಿರುಕುಳಕ್ಕೆ ಜನರು ಬೇಸತ್ತುಹೋಗಿದ್ದಾರೆ. 1 ಲಕ್ಷ ರೂಪಾಯಿ ಸಾಲಕ್ಕೆ ಬಡ್ಡಿ ಹಣ ಕಟ್ಟಿಲ್ಲವೆಂದು ದಶರಹ ಬಳ್ಳಾರಿ ಎಂಬಾತನನ್ನು ಹಿಡಿದು ಬೆತ್ತಲೆಗೊಳಿಸಿ ನಾಲ್ವರು ಕಿರಾತಕರು ಮನಬಂದಂತೆ ಥಳಿಸಿದ್ದಾರೆ. ಬೆಲ್ಟ್, ಕೇಬಲ್ ವೈರ್, ಲಾಠಿಯಿಂದ ಮಾರಣಂತಿಕವಾಗಿ ಹಲ್ಲೆ ನಡೆಸಿದ್ದಾರೆ.

ಗದಗ ಜಿಲ್ಲೆಯ ಬೆಟಗೇರಿ ನಗರದಲ್ಲಿ ಈ ಘಟನೆ ನದೆದಿದೆ. ದಶರಥ ಮಂಜುನಾಥ ಹಂಸನೂರು ಬಳಿ ಎರಡು ವರ್ಷದ ಹಿಂದೆ 1 ಲಕ್ಷ ರೂಪಾಯಿ ಸಾಲ ಪಡೆದಿದರಂತೆ ಸಾಲಕ್ಕೆ ಬಡ್ಡಿಯನ್ನು ನೀಡುತ್ತಿದ್ದರಂತೆ ಇತ್ತೀಚೆಗೆ ಕೆಲಸ ಇಲ್ಲದೇ ಬಡ್ಡಿ ತೀರಿಸಲು ಆಗಿರಲಿಲ್ಲ. ಏಕಾಏಕಿ ಮನೆಗೆ ಬಂದ ನಾಲ್ವರು ಸೆಟಲ್ ಮೆಂಟ್ ಮಾಡು ಎಂದು ಬೇರೊಂದು ಮನೆಗೆ ಕರೆದೊಯ್ದು ಚಿತ್ರಹಿಂಸೆ ನೀಡಿದ್ದಾರಂತೆ. ಬಟ್ಟೆ ಬಿಚ್ಚಿಸಿ, ಬಾಯಿಗೆ ಬಟ್ಟೆ ತುರುಕಿ, ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಮುಂಜಾನೆ ಮೂರುಗಂಟೆ ಸುಮಾರಿಗೆ ಅವರಿಂದ ತಪ್ಪಿಸಿಕೊಂಡು ಬಂದು ಬಂದಿದ್ದಾಗಿ ದಶರಥ ತಿಳಿಸಿದ್ದಾರೆ.

ಹಲ್ಲೆಗೊಳಗಾಗಿರುವ ದಶರಥ, ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button