ಪ್ರಗತಿವಾಹಿನಿ ಸುದ್ದಿ; ರಾಂಚಿ: ಜಿಪಿಎಸ್ ಸಿ ಪರೀಕ್ಷೆಯಲ್ಲಿ 108ನೇ ರ್ಯಾಂಕ್ ಪಡೆದಿದ್ದ ಮಿಥಾಲಿ ಶರ್ಮಾ, ಕೆಲಸಕ್ಕೆ ಸೇರಿದ್ದ ಮೊದಲ ದಿನವೇ ಲಂಚ ಪಡೆಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿರುವ ಘಟನೆ ನಡೆದಿದೆ.
ಮಿಥಾಲಿ ಶರ್ಮಾ ಅವರನ್ನು ಜಾರ್ಖಂಡ್ ನ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಂಧಿಸಿದೆ. ಕೋ ಆಪರೆಟಿವ್ ಸೊಸೈಟಿಯಲ್ಲಿ ಸಹಾಯಕ ರಿಜಿಸ್ಟ್ರಾರ್ ಹುದ್ದೆಯಲ್ಲಿದ್ದ ಮಿಥಾಲಿ ಶರ್ಮಾ, 10 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಮಿಥಾಲಿ ಶರ್ಮ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬಗ್ಗೆ ಕೊಡೆರ್ಮಾ ವ್ಯಾಪಾರ್ ಮಂಡಲ್ ಸಹೋಗ್ ಸಮಿತಿ ಲಿಮಿಟೆಡ್ ನ ನಿರ್ವಹಣಾ ಸಮಿತಿ ಸದಸ್ಯರಾಗಿದ್ದ ರಾಮೇಶ್ವರ ಪ್ರಸಾದ್ ದೂರು ನೀಡಿದ್ದರು. ಜೂನ್ 16ರಂದು ಮಿಥಾಲಿ ಶರ್ಮಾ ಕಚೇರಿ ಪರಿಶೀಲನೆಗೆ ಬಂದಿದ್ದರು. ನನಗೆ ಗೊತ್ತಿಲ್ಲದ ಯಾವುದೋ ವಿಚಾರ ತೆಗೆದುಕೊಂಡು ನನಗೆ ಶೋಕಾಸ್ ನೋಟೀಸ್ ನೀಡಿದ್ದಾರೆ. ಇದನ್ನು ಕೇಳಲು ನಾನು ಅವರ ಕಚೇರಿಗೆ ಹೋಗಿದ್ದೆ. ಈ ವೇಳೆ ಇಲಾಖೆಯ ಶಿಸ್ತು ಕ್ರಮದಿಂದ ಪಾರಾಗಬೇಕಾದರೆ 20 ಸಾವಿರ ಹಣ ನೀಡುವಂತೆ ಹೇಳಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ