Kannada NewsKarnataka News

ನೇಕಾರರ ಸಭೆ ನಡೆಸಿದ ಶಾಸಕ ಅಭಯ ಪಾಟೀಲ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –  ಶಾಸಕ  ಅಭಯ ಪಾಟೀಲ ರವರ ನೇತೃತ್ವದಲ್ಲಿ ಬೆಳಗಾವಿ ಪ್ರವಾಸಿ ಮಂದಿರದಲ್ಲಿ “ನೇಕಾರರ ಸಭೆ “ಜರುಗಿತು
    ಈ ಸಭೆಯಲ್ಲಿ ನೇಕಾರ ಸಧ್ಯದ ಸಮಸ್ಯೆಗಳ ಬಗ್ಗೆ  ಸುದೀರ್ಘ ಚರ್ಚೆ ನಡೆಸಲಾಯಿತು.   ಜವಳಿ ಇಲಾಖೆ, ವಿದ್ಯುತ್ ಇಲಾಖೆ, ಮಹಾನಗರ ಪಾಲಿಕೆ, ಕಾರ್ಮಿಕ ಇಲಾಖೆಯ  ಉನ್ನತ ಅಧಿಕಾರಿಗಳೊಂದಿಗೆ ಪ್ರಚಲಿತ ನೇಕಾರರ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು.
 ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳನ್ನು  ನೇಕಾರರಿಗೂ  ನೀಡಬೇಕು.  ಈ ಹಿನ್ನೆಲೆಯಲ್ಲಿ ನೇಕಾರರ ಸರ್ವೇ ಕೆಲಸಕ್ಕೆ  ಕಾರ್ಮಿಕ ಇಲಾಖೆಯಿಂದ ಚಾಲನೆ ನೀಡಲಾಯಿತು. ಕೂಲಿ ನೇಯುವವರು, ಬಿಂಬ ಕೆಚ್ಚುವವರು,  ಬಾಬಿನ ಜಗ್ಗುವವರು,  ಜಕಾರಡ್ ಕಟ್ಟುವವರು,  ಮುಂತಾದ ನಾಲ್ಕು  ಮಗ್ಗಗಳವರೆಗೆ ಈ ವ್ಯಾಪ್ತಿಗೆ ಬರುತ್ತಾರೆ.
  “ನೇಕಾರ ಸಮ್ಮಾನ ನಿಧಿ” ಯೋಜನೆಯಡಿ ಅರ್ಹ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಗೆ ಜವಳಿ ಇಲಾಖೆಯಿಂದ ಸರ್ವೇ ಮಾಡಲು ಸೂಚಿಸಲಾಯಿತು.
 ನೇಕಾರಿಕೆ ಜವಳಿ ಉದ್ಯೋಗಕ್ಕೆ  ,  ವಿದ್ಯುತ್ ಇಲಾಖೆ ಹಾಗೂ ಮಹಾನಗರ ಪಾಲಿಕೆಯ ಅನುಮತಿ (ಲೈಸನ್ಸ್)  ಪಡೆಯುವ ನಿಯಮ ರದ್ದು ಮಾಡುವ ನಿರ್ಧಾರ.
  ವಿದ್ಯುತ್ ಇಲಾಖೆ ನೇಕಾರಿಕೆ ಉದ್ಯೋಗದವರಿಗೆ ಹೆಚ್ಚುವರಿ ಮಿನಿಮಮ್ ಚಾರ್ಜ್ ಅಳವಡಿಸುವುದನ್ನು ವಿನಾಯತಿ ನೀಡುವ ನಿರ್ಣಯ ಮಾಡಲಾಯಿತು.
  “ಲಾಕ್ ಡೌನ್ ”  ಹಿನ್ನೆಲೆಯಲ್ಲಿ  ಹೆಸ್ಕಾಂ ಇಲಾಖೆ ನೇಕಾರರಿಗೆ ಹೆಚ್ಚುವರಿ ಬಿಲ್ ನೀಡಿದ್ದು,  ಕೂಡಲೇ ಈ ಬಗ್ಗೆ  ಸರಿಪಡಿಸುವಂತೆ ಸೂಚಿಸಲಾಯಿತು.
 ಇದರೊಂದಿಗೆ,  ಬಹು ಮುಖ್ಯವಾಗಿ ರಾಜ್ಯ ಸರ್ಕಾರ ನೇಕಾರರು ನೇಯ್ದ  ಸೀರೆಗಳನ್ನು  ಕೂಡಲೇ ಯೋಜನೆ ರೂಪಿಸಿ,  ನೇಕಾರರಿಂದಲೇ ಖರೀದಿಸಬೇಕು. ಇದರಿಂದ ನೇಕಾರಿಕೆ ವೃತ್ತಿ ಉಳಿಸಲು ಸಾದ್ಯವಾಗುತ್ತದೆ  ಎನ್ನುವ ಅಭಿಪ್ರಾಯ ವ್ಯಕ್ತವಾಯಿತು.
“ಲಾಕ್ ಡೌನ್ ”  ಹಿನ್ನೆಲೆಯಲ್ಲಿ  ದುಸ್ತರವಾದ ನೇಕಾರರ ಬೆಂಬಲಕ್ಕೆ ಇರುತ್ತೇನೆ,   ನಿಮ್ಮ ಅಭಿಪ್ರಾಯವನ್ನು ಸರ್ಕಾರದ ಗಮನಕ್ಕೆ ತಂದು,  ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡೋಣ ಎಂದು ಅಭಯ ಪಾಟೀಲ ತಿಳಿಸಿದರು.

Related Articles

Back to top button