ಅನಗೋಳದ ಕೆರೆದಂಡೆಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುತ್ಥಳಿ ನಿರ್ಮಾಣಕ್ಕೆ ಶಂಕುಸ್ಥಾಪನೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಯಾವುದೇ ಮಹಾಪುರುಷರನ್ನು ಒಂದು ಜಾತಿಗೆ ಸೀಮಿತಗೊಳಿಸುವ ಕೆಲಸ ಮಾಡಬಾರದು. ಸಂಗೊಳ್ಳಿ ರಾಯಣ್ಣ ಕೂಡ ಒಂದು ಜಾತಿಗೆ ಸೀಮಿತರಲ್ಲ. ಅವರನ್ನು ಸೀಮಿತಗೊಳಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದು ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಹೇಳಿದರು.
ಅನಗೋಳದ ಕೆರೆ ದಂಡೆಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಪ್ರತಿಮೆ ಸ್ಥಾಪನೆಗೆ ಭಾನುವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅಭಯ ಪಾಟೀಲ, ಗ್ರಾಮದ ಕೆರೆ ದಂಡೆಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪಿಸಬೇಕೆಂಬ ಇಂಗಿತವನ್ನು ಗ್ರಾಮಸ್ಥರು ವ್ಯಕ್ತಪಡಿಸುತ್ತ ಬಂದಿದ್ದರು. ಇದಕ್ಕಾಗಿ ವಿಶೇಷ ಸಭೆ ನಡೆಸಿ ನಿರ್ಣಯ ಕೂಡ ಕೈಗೊಂಡಿದ್ದರು. ಇದೀಗ ಗ್ರಾಮವಾಸಿಗಳ ಬಹುದಿನದ ಕನಸು ನನಸಾಗುತ್ತಿದೆ ಎಂದರು.
ಮೊದಲ ಹಂತದಲ್ಲಿ ಇಲ್ಲಿ ರಸ್ತೆ ನಿರ್ಮಾಣ ಮಾಡಲಾಗಿದೆ. ನಂತರದಲ್ಲಿ ಕೆರೆ ದಂಡೆಯಲ್ಲಿ ಪೇವರ್ ಬ್ಲಾಕ್ ಅಳವಡಿಕೆ, ಕಾರಂಜಿ, ದೀಪಾಲಂಕಾರಗಳ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವುದು ಇದಕ್ಕಾಗಿ ಈಗಾಗಲೇ 1 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಅಭಯ ಪಾಟೀಲ ತಿಳಿಸಿದರು.
ಗ್ರಾಮಸ್ಥರ ಪರವಾಗಿ ಮಾತನಾಡಿದ ಸಿದ್ಧಾರ್ಥ ಪಾಟೀಲ, ಅಭಯ ಪಾಟೀಲ ಅವರ ಸ್ಪಂದನೆಗೆ ಕೃತಜ್ಞತೆ ಸಲ್ಲಿಸಿದರಲ್ಲದೆ, ಗ್ರಾಮದ ಎಲ್ಲ ಭಾಷೆ, ಜಾತಿ, ಜನಾಂಗದವರು ಒಗ್ಗಟ್ಟಾಗಿ ಇದರಲ್ಲಿ ಭಾಗಿಯಾಗಿರುವುದು ಸಂತಸದ ವಿಚಾರ ಎಂದರು.
ಯಲ್ಲಪ್ಪ ಪೂಜಾರಿ, ಪ್ರಕಾಶ ಪೂಜಾರಿ, ಶಿವಾಜಿ ಶಹಾಪುರಕರ, ವಸಂತ ದಳವಾಯಿ, ನಿಖಿಲ ಅಂಗಡಿ, ಶಿವರಾಜ ಹೊಳಿಮಠ, ನಿಖಿಲ ಅಂಗಡಿ, ದೀಪಕ ಸೋಮನ್ನಾಚೆ, ಗ್ರಾಮದ ಮಹಿಳೆಯರು, ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮಠದಲ್ಲಿ ಓದುತ್ತಿದ್ದ ಮೂವರು ಬಾಲಕರು ದಿಢೀರ್ ನಾಪತ್ತೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ