Kannada NewsKarnataka NewsNational

*ಕಾರ್ಯಾಚರಣೆ ವೇಳೆ ಮಿಗ್-29 ಫೈಟರ್ ಜೆಟ್ ಪತನ*

ಪ್ರಗತಿವಾಹಿನಿ ಸುದ್ದಿ: ತಾಂತ್ರಿಕ ದೋಷದಿಂದ ರಾಜಸ್ತಾನದ ಜೈಪುರದ ಬಾರ್ಮರ್ ಪ್ರದೇಶದಲ್ಲಿ ಭಾರತೀಯ ವಾಯುಪಡೆಯ ಮಿಗ್-29 ಫೈಟರ್ ಜೆಟ್ ರಾತ್ರಿ ತರಬೇತಿ ಕಾರ್ಯಾಚರಣೆ ವೇಳೆ ಪತನಗೊಂಡ ಘಟನೆ ನಡೆದಿದೆ.

ಜೆಟ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಭಾರೀ ಪ್ರಮಾದಣದಲ್ಲಿ ಸ್ಫೋಟಗೊಂಡು, ಬೆಂಕಿಗೆ ಆಹುತಿಯಾಗಿದೆ. ಜೆಟ್ ಪತನದ ಕೊನೆ ಘಳಿಗೆಗೆ ತಲುಪುತ್ತಿದ್ದಂತೆ ಪೈಲೆಟ್ ಸಮಯ ಪ್ರಜ್ಞೆ ಮೆರೆದು ಅವರು ಹೊರಕ್ಕೆ ಹಾರಿದ್ದಾರೆ. ಇದಕ್ಕೂ ಮೊದಲು ಜೆಟ್ ಅನ್ನು ನಿರ್ಜನ ಪ್ರದೇಶಕ್ಕೆ ಕೊಂಡೊಯ್ಯೋದಿದ್ದಾರೆ. ಇನ್ನು ಪೈಲೆಟ್‌ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Home add -Advt

ಘಟನೆಯಲ್ಲಿ ಯಾವುದೇ ಪ್ರಾಣ ಮತ್ತು ಆಸ್ತಿ ಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಡಿಸಿ, ಎಸ್‌ಪಿ ಮತ್ತಿತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Related Articles

Back to top button