Kannada NewsLatest

ನಸುಕಿನಲ್ಲೇ ಅಧಿಕಾರಿಗಳ ತಂಡದೊಂದಿಗೆ ರಸ್ತೆಗಿಳಿದ ಅಭಯ ಪಾಟೀಲ

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: 

” ಜನಸ್ಪಂದನ” ಕಾರ್ಯಕ್ರಮದಲ್ಲಿ  ಬಂದ ಸಮಸ್ಯೆಗಳ ನಿಜ ದರ್ಶನಕ್ಕೆ ಹಾಗೂ ಅವುಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಇಂದು ಬೆಳಗ್ಗೆ : 6:15 ರಿಂದ ವಿವಿಧ ಇಲಾಖೆಗಳ ಅಧಿಕಾರಿಗಳ ತಂಡದೊಂದಿಗೆ,  ಶಾಸಕ  ಅಭಯ ಪಾಟೀಲ  ಮಹಾದ್ವಾರ ರೋಡ್, ಕಪಿಲೇಶ್ವರ ಕಾಲೋನಿ, ಗೋವಾವೇಸ್ ರೋಡ್,  ಶಾಸ್ತ್ರೀನಗರ,  ಶಾಹಾಪುರ ಭಾಗಗಳಲ್ಲಿ  ಸ್ಥಳ ಪರಿಶೀಲನೆ ಮಾಡಿದರು.

Home add -Advt

ವಿಶೇಷವಾಗಿ ನೀರಿನ ಸಮಸ್ಯೆ,  ಹೊಸ ಬೋರವೆಲ್,  ಹೊಸ ಪೈಪಲೈನ್ ನಿರ್ಮಾಣಕ್ಕೆ ಅಂದಾಜು , ಗ್ಯಾಸ್ ಪೈಪಲೈನ್ ನಿರ್ಮಾಣ,  ಕಸದ ವಿಲೇವಾರಿಯ ಸಮಸ್ಯೆಗೆ ಪರ್ಯಾಯ ವ್ಯವಸ್ಥೆ,   ಹೊಸ ಚರಂಡಿ ಹಾಗೂ ಒಳಚರಂಡಿ ನಿರ್ಮಾಣದ ಜೊತೆ ಸ್ವಚ್ಛತೆ,  ಬೀದಿ ದೀಪಗಳ ನಿರಂತರತೆ,   ಹೊಸ ರಸ್ತೆಗಳ ನಿರ್ಮಾಣ,  ಪುಟಪಾತ್  ಹೀಗೆ,  ಹತ್ತು ಹಲವು ಸಮಸ್ಯೆಗಳ ಪರಿಹಾರಕ್ಕೆ ಸ್ಪಂದಿಸಿ,  ಅಧಿಕಾರಿಗಳಿಗೆ ಸ್ಥಳೀಯ ಜನರ ದೈನಂದಿನ ಬದುಕಿನ ಸಮಸ್ಯೆಗಳ ಬಗ್ಗೆ ವಿವರಿಸಿದರು.

ಸಮಸ್ಯೆಗಳ ಪರಿಹಾರಕ್ಕೆ  ಶಾಸಕರ ನಿಧಿ,  ವಿವಿಧ ಇಲಾಖೆಗಳ ಅನುದಾನದಡಿಯಲ್ಲಿ ಕೂಡಲೇ  ಕಾರ್ಯ ಪ್ರವರ್ತರಾಗುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಹೆಚ್ಚಿನ ಸುದ್ದಿಗಳಿಗಾಗಿ pragativahini.com ನೋಡಿ.

Related Articles

Back to top button