ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಕಳೆದ ಹಲವಾರು ವರ್ಷಗಳಿಂದ ಮೂಲಭೂತ ಸೌಕರ್ಯಗಳಾದ ನೀರು, ಚರಂಡಿ, ಒಳಚರಂಡಿ, ರಸ್ತೆ, ಬೀದಿದೀಪ, ಕೊರತೆಯಿಂದ ಕಂಗಾಲಾಗಿರುವ ಇಲ್ಲಿನ ಉದ್ಯಮಿಗಳು ಅಲ್ಲಿಗೆ ಭೇಟಿ ನೀಡುವಂತೆ ಶಾಸಕ ಅಭಯ ಪಾಟೀಲ ಬಳಿ ವಿನಂತಿಸಿದ್ದರು. ಹಾಗಾಗಿ, ಇಂದು ಅಭಯ ಪಾಟೀಲ ಎಲ್ಲಾ ಇಲಾಖೆಗಳ ಅಧಿಕಾರಿಗಳ ಜೊತೆ ಸ್ಥಳೀಯ ಪರಿಶೀಲನೆ ನಡೆಸಿದರು.
ಮುಖ್ಯವಾಗಿ ಹೆಸ್ಕಾಂ ಇಲಾಖೆ ಎರಡು ವರ್ಷಗಳಿಂದ ರಸ್ತೆ ಅಗೆದಿರುವುದರಿಂದ ಇಲ್ಲಿ ಬರುವ ಲಾರಿ ಟ್ರಾನ್ಸಪೊರ್ಟ್ ಹೊಂಡದಲ್ಲಿ ಸಿಕ್ಕಿ ಫಜೀತಿ ಅನುಭವಸುವ ದೃಶ್ಯ ಸರ್ವೇ ಸಾಮಾನ್ಯ ವಾಗಿತ್ತು. ಇದನ್ನು ಶಾಸಕರು ಗಂಭೀರವಾಗಿ ಪರಿಗಣಿಸಿ, ಬರುವ ಸೋಮವಾರದಿಂದ ಈ ಸಮಸ್ಯೆ ಪರಿಹಾರಕ್ಕೆ ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.
ಅದೇ ರೀತಿ, “ಗ್ಯಾಸ್ ಪೈಪ್ ಲೈನ್ ” ಕಾರ್ಯ ಕೂಡಲೇ ಮುಗಿಸುವಂತೆ, ಕುಡಿಯುವ ನೀರಿನ ಸಮಸ್ಯೆಗೆ ಶೀಘ್ರ ಪರಿಹಾರ ಒದಗಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.
ಒಟ್ಟಾರೆ, ಉದ್ಯಮಭಾಗ ಪರಿಸರದ ಉದ್ಯಮಿಗಳ ಬಹಳ ದಿನಗಳ ನೋವಿನ ಯಾತನೆಗೆ ಶಾಸಕರು ಇಂದು ನೆಮ್ಮದಿಯ ಭರವಸೆ ನೀಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ