
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಬೆಳಗಾವಿಯ ESI ಆಸ್ಪತ್ರೆ ಕಾರ್ಮಿಕರು ವಾಸಿಸುವ ಪ್ರದೇಶದಿಂದ 15 ಕಿ.ಮೀ. ದೂರವಿದ್ದು ಅದನ್ನು ಕಾರ್ಮಿಕರ ಅನುಕೂಲದ ದೃಷ್ಟಿಯಿಂದ ಬೆಳಗಾವಿ ದಕ್ಷಿಣ ಕ್ಷೇತ್ರಕ್ಕೆ ಸ್ಥಳಾಂತರಿಸಬೇಕು ಎಂದು ಶಾಸಕ ಅಭಯ ಪಾಟೀಲ ವಿಧಾನಸಭೆಯಲ್ಲಿ ಒತ್ತಾಯಿಸಿದರು.
ಕೇಂದ್ರದ ESI ಕಾರ್ಪೊರೇಷನ್ ತಂಡ ಸ್ಥಳ ಪರಿಶೀಲನೆಗೆ ಬಂದಾಗ ಸ್ವತಃ ತಾವೂ ಅಲ್ಲಿದ್ದು ಕಾರ್ಮಿಕ ಇಲಾಖೆ ಗುರುತಿಸಿದ ಸ್ಥಳವನ್ನು ತಂಡ ಒಪ್ಪಿದೆ. ಆದರೆ ತಮಗೆ ನೀಡಿದ ಉತ್ತರದಲ್ಲಿ ಕಾರ್ಪೊರೇಷನ್ ತಂಡ ಒಪ್ಪಿಲ್ಲ ಎಂದು ತಿಳಿಸಿದ್ದಾರೆ ಎಂದು ಆಕ್ಷೇಪಿಸಿದರು.
40 ಸಾವಿರ ಜನ ಕಾರ್ಮಿಕರು ಇರುವ ಉದ್ಯಮಬಾಗ್ ಪರಿಸರ ಈಗ ಆಸ್ಪತ್ರೆ ಇರುವ ಅಶೋಕನಗರ ಪ್ರದೇಶದಿಂದ 15 ಕಿ.ಮೀ. ದೂರವಿದೆ. ಇಷ್ಟು ದೂರ ಹೋಗಿ ಯಾವ ಕಾರ್ಮಿಕರೂ ಚಿಕಿತ್ಸೆ ಪಡೆಯುವುದಿಲ್ಲ. 2 ವರ್ಷಗಳ ಹಿಂದೆ ಈ ಆಸ್ಪತ್ರೆಯನ್ನು ಬೆಳಗಾವಿ ದಕ್ಷಿಣಕ್ಕೆ ಸ್ಥಳಾಂತರಿಸಲು ಒತ್ತಾಯಿಸಿದಾಗ ಸಚಿವರು ಒಪ್ಪಿದ್ದರು. ಆದರೆ ಇನ್ನೂ ಅದು ಕಾರ್ಯಗತಗೊಂಡಿಲ್ಲ ಎಂದರು.
ಇದಕ್ಕೆ ಉತ್ತರಿಸಿದ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಕಾರ್ಮಿಕ ಇಲಾಖೆ ಗುರುತಿಸಿದ ಜಾಗವನ್ನು ಕೇಂದ್ರದ ತಂಡ ನಿರಾಕರಿಸಿದೆ. ಬದಲಾಗಿ ಈಗ ಆಸ್ಪತ್ರೆ ಇರುವ ಪ್ರದೇಶದಲ್ಲೇ ಹೆಚ್ಚುವರಿ 2 ಎಕರೆ ಜಮೀನು ನೀಡಿದರೆ ಅಲ್ಲೇ ಹೊಸ ಕಟ್ಟಡ ನಿರ್ಮಾಣದ ಸಲಹೆ ನೀಡಿದೆ. ಆದರೆ 40 ಸಾವಿರ ಕಾರ್ಮಿಕರಿರುವುದು ಈ ಪ್ರದೇಶದಿಂದ 15 ಕಿ.ಮೀ. ಆಚೆ. ಇಲ್ಲಿ ಆಸ್ಪತ್ರೆ ನಿರ್ಮಿಸಿದರೆ ಕಾರ್ಮಿಕರಿಗೆ ಯಾವ ಅನುಕೂಲವೂ ಆಗುವುದಿಲ್ಲ. ಈ ಕುರಿತು ಶಾಸಕರು ಹಾಗೂ ತಾವು ಮುಖ್ಯಮಂತ್ರಿ ಜೊತೆ ಕುಳಿತು ಸಮಾಲೋಚಿಸಿ ನಿರ್ಧಾರಕ್ಕೆ ಬರುವುದಾಗಿ ತಿಳಿಸಿದರು.
ಹಾಲಿ ಇರುವ ಆಸ್ಪತ್ರೆ ಬಳಿ ಹಾಸ್ಟೆಲ್ ಕಟ್ಟಡ ನಿರ್ಮಾಣವಾಗಿದ್ದು ESI ಹೊಸ ಆಸ್ಪತ್ರೆ ನಿರ್ಮಾಣವಾಗುವವರೆಗೆ ಈ ಹಾಸ್ಟೆಲ್ ಕಟ್ಟಡ ಬಳಕೆ ಮಾಡಲು ಅವಕಾಶ ನೀಡಬೇಕು ಎಂದು ಅಭಯ ಪಾಟೀಲ ಪುನಃ ಆಗ್ರಹಿಸಿದರು.
*ಕಾಂಗ್ರೆಸ್ಸಿಗರು ತಲೆ ತಿರುಕರು ಎಂದ ಬಿಎಸ್ ವೈ; ಯಡಿಯೂರಪ್ಪಗೆ ಅರಳುಮರಳು ಎಂದ ಸಿದ್ದರಾಮಯ್ಯ*
https://pragati.taskdun.com/b-s-yedyurappasiddaramaihtender-golmal/
ಪ್ರೇಮಿಗಳ ದಿನ ಆಚರಿಸಲು ಹೋಗಿ ಪ್ರಾಣತೆತ್ತ ಜೋಡಿ
https://pragati.taskdun.com/couple-who-went-to-celebrate-valentines-in-goa-drown/
*ಕಾಂಗ್ರೆಸ್ ತನ್ನ ಕಾಲದ ಹಗರಣಗಳ ಬಗ್ಗೆ ಮೊದಲು ಉತ್ತರ ನೀಡಲಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*
https://pragati.taskdun.com/cm-basavaraj-bommaireactioncongresss-leaders/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ