ಪ್ರವಾಹ ಪೀಡಿತ ಜನರಿಗೆ ನೆರವಾದ ಶಾಸಕ ಅನಿಲ ಬೆನಕೆ
ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ಬೆಳಗಾವಿಯ ಉತ್ತರ ವಿಧಾನಸಭಾ ಮತಕ್ಷೇತ್ರದ ಅನೇಕ ಸ್ಥಳಗಳಲ್ಲಿ ಮಳೆಯ ನೀರು ರಭಸದಿಂದ ಮನೆಒಳಗೆ ನುಗ್ಗಿಕೊಂಡು ಹಾಗೂ ಅನೇಕ ಒಳಚರಂಡಿಗಳು ನೀರಿನ ರಭಸಕ್ಕೆ ಒಡಿದು ಹೋಗಿರುವುದರಿಂದ ನೀರು ರಸ್ತೆಯ ಮೇಲೆ ನಿಂತಿದ್ದು ಅದಕ್ಕೆ ಶಾಸಕರಾದ ಅನಿಲ ಬೆನಕೆ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿಯ ಗಂಭೀರ ಪರಿಸ್ಥಿತಿಯನ್ನು ಅವಲೋಕಿಸಿ ಅಲ್ಲಿಯ ರಹವಾಸಿಗಳ ಕುಂದುಕೊರತೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಅನೇಕ ಕ್ರಮಗಳನ್ನು ಜರುಗಿಸಿದರು.
ಉತ್ತರ ಮತಕ್ಷೇತ್ರದ ಮನೆಗಳು ನೆಲಸಮವಾಗಿದ್ದು, ಅನೇಕ ಮನೆಗಳಿಗೆ ಅಪಾರ ಹಾನಿ ಉಂಟಾಗಿದ್ದು, ಸ್ಥಳದಲ್ಲಿಯೇ ಕಂದಾಯ ಅಧಿಕಾರಿಗಳನ್ನು ಕರೆಯಿಸಿ ಸ್ಥಳ ಪರೀಕ್ಷಣೆ ಮಾಡಿ ತುರ್ತಾಗಿ ವರದಿ ನೀಡುವಂತೆ ಹಾಗೂ ಪರಿಹಾರಧನವನ್ನು ಬಿಡುಗಡೆ ಮಾಡುವಂತೆ ಸೂಚಿಸಿದರು. ಈ ಕಾರ್ಯಾಚರಣೆಯಲ್ಲಿ ಅನೇಕ ಜಿ.ಸಿ.ಬಿ.ಗಳನ್ನು ಅಳವಡಿಸಲಾಯಿತು.
ಅಂಬೇಡ್ಕರ ಭವನ, ನೆಹರು ನಗರ ಮತ್ತು ಧರ್ಮನಾಥ ಭವನ ರಾಮನಗರದಲ್ಲಿ ಬೆಳಗಾವಿ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆಯು ರಚಿಸಿದ ಪರಿಹಾರ ಕೇಂದ್ರಗಳಿಗೆ ಸಂತ್ರಸ್ತ ಜನರಿಗೆ ಸ್ಥಳಾಂತರಿಸಲಾಯಿತು.
ಚವ್ಹಾಟ ಗಲ್ಲಿಯಲ್ಲಿರುವ ಶಾಸಕರ ಕಚೇರಿಯು ಮಳೆ ನಿಲ್ಲುವವರೆಗೆ ಅಹೊರಾತ್ರಿ ಜನರ ಸಂಕಷ್ಟವನ್ನು ಪರಿಹರಿಸಲು ತೆರೆದು ಇರುತ್ತದೆ ಎಂದು ಶಾಸಕ ಅನಿಲ ಬೆನಕೆ ತಿಳಿಸಿದ್ದಾರೆ. ////
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ