ಸರಕಾರಿ ಪದವಿ ಪೂರ್ವ ಕಾಲೇಜಿಗೆ ಶಾಸಕ ಅನಿಲ ಬೆನಕೆ ಭೇಟಿ, ಪರಿಶೀಲನೆ
ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ಶಾಸಕ ಅನಿಲ ಬೆನಕೆ ನಗರದ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯಕ್ಕೆ ಭೇಟಿ ನೀಡಿ ಅಲ್ಲಿನ ಮೂಲಭೂತ ಸೌಲಭ್ಯಗಳ ಮಾಹಿತಿ ಪಡೆದುಕೊಂಡರು.
ಮಹಾವಿದ್ಯಾಲಯದಲ್ಲಿ ಅನೇಕ ಜಲ್ವಂತ ಸಮಸ್ಯೆಗಳನ್ನು ಆಲಿಸಿದ ಶಾಸಕರು ಮುಖ್ಯವಾಗಿ ಶೌಚಾಲಯ ಹಾಗೂ ಕಟ್ಟಡ ದುರಸ್ತಿ ಕಾಮಗಾರಿ ಸಮಸ್ಯೆ ಇದ್ದು ಅದನ್ನು ಆದಷ್ಟು ಬೇಗನೆ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು ಹಾಗೂ ಇನ್ನಿತರೆ ಮೂಲಭೂತ ಸೌಲಭ್ಯಗಳನ್ನು ಮಾಡಿಸಿಕೊಡುವುದಾಗಿ ಹೇಳಿದರು.
ನಂತರದಲ್ಲಿ ಬೆಳಗಾವಿಯು ಸ್ಮಾರ್ಟ ಸಿಟಿ ಪಟ್ಟಿಯ ಮೊದಲ ಸ್ಥಾನದಲ್ಲಿದ್ದು ಆದರೂ ಹಿಂದಿನ ಸರ್ಕಾರದ ನಿರ್ಲಕ್ಷದಿಂದ ಸರದಾರ ಪದಿಪೂರ್ವ ಮಹಾವಿದ್ಯಾಲಯ ಕಾಲೇಜು ಮೂಲಭೂತ ಸೌಲಭ್ಯಗಳಿಂದ ವಂಚಿತಗೊಂಡಿದೆ ಎಂದು ಹಿಂದಿನ ಸರ್ಕಾರದ ವಿರುದ್ದ ಕಿಡಿಕಾರಿದರು.
ಕಾಲೇಜಿನಲ್ಲಿ ಈಗಾಗಲೇ ಮಹಿಳೆಯರ ಶೌಚಾಲಯ, ತರಗತಿಗಳ ಮೇಲ್ಛಾವಣಿಗಳ ದುರಸ್ಥಿ ಹೀಗೆ ಇನ್ನಿತರೆ ಅಭಿವೃಧ್ದಿ ಕಾರ್ಯಗಳನ್ನು ನಮ್ಮ ಸರ್ಕಾರದ ಅವಧಿಯಲ್ಲಿ ಪೂರ್ಣ ಪ್ರಮಾಣದ ಅನುದಾನ ಬಿಡುಗಡೆ ಮಾಡಿಸಿ ನನ್ನ ಮತಕ್ಷೇತ್ರದಲ್ಲಿನ ಎಲ್ಲ ಕಾಲೇಜು ಹಾಗೂ ಶಾಲೆಗಳ ಅಭಿವೃಧ್ದಿ ಪಡಿಸಲಾಗುವುದು ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದರು.
ಹಾಗೆಯೇ ಸಂಬಂಧಿತ ಅಧಿಕಾರಿಗಳ ವಿರುದ್ದ ಹರಿಹಾಯ್ದ ಶಾಸಕರು ಕಾಲೇಜುಗಳ ಅಭಿವೃಧ್ದಿಯನ್ನು ನಿರ್ಲಕ್ಷಿಸಿದವರ ವಿರುದ್ದ ಕಠಿಣ ಕ್ರಮ ಜರುಗಿಸುವುದಾಗಿ ತಿಳಿಸಿದರು ಮತ್ತು ಇಷ್ಟು ವರ್ಷ ಆಗದ ಕೆಲಸಗಳನ್ನು ನನ್ನ ಆಡಳಿತಾವಧಿಯಲ್ಲಿ ಮಾಡಿ ತೋರಿಸುವುದಾಗಿ ಭರವಸೆಯನ್ನು ನೀಡಿದರು.
ತದನಂತರದಲ್ಲಿ ನಾಳೆ ಬೆಳಿಗ್ಗೆ 10.30 ಕ್ಕೆ ಸರದಾರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಸ್ವಚ್ಚತಾ ಅಭಿಯಾನವನ್ನು ಆಯೋಜಿಸಲಾಗಿದ್ದು ಎಲ್ಲ ಕಾರ್ಯಕರ್ತರು ಈ ಸ್ವಚ್ಚತಾ ಅಭಿಯಾನದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ವಿನಂತಿಸಿಕೊಂಡರು.
ಈ ಸಂದರ್ಭದಲ್ಲಿ ಶಾಸಕರೊಂದಿಗೆ ಕಾಲೇಜು ಪ್ರಾಂಶುಪಾಲರು, ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಹಾಗೂ ಇತರರು ಉಪಸ್ಥಿತರಿದ್ದರು.///
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ