ಪ್ರಗತಿವಾಹಿನಿ ಸುದ್ದಿ, ಚನ್ನಮ್ಮನ ಕಿತ್ತೂರು – ಕಿತ್ತೂರು ಮತ ಕ್ಷೇತ್ರದ ಶಾಸಕ ಮಹಾಂತೇಶ ದೊಡ್ಡಗೌಡರ ವಿವಿಧ ಗ್ರಾಮಪಂಚಾಯಿತಿ ಪ್ರದೇಶಗಳಿಗೆ ಭೇಟಿ ನೀಡಿ ಟಾಸ್ಕ್ ಫೋರ್ಸ್ ಸದಸ್ಯರೊಂದಿಗೆ ಚರ್ಚೆ ನಡೆಸಿದರು. ಜೊತೆಗೆ ಮಾಸ್ಕ್, ಸೆನಿಟೈಸರ್ ಹಾಗೂ ಟೋಪಿಗಳನ್ನು ವಿತರಿಸಿದರು.
ಕಲಭಾಂವಿ, ಹುಣಶೀಕಟ್ಟಿ, ದಾಸ್ತಿಕೊಪ್ಪ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಪ್ರವಾಸ ನಡೆಸಿದ ಶಾಸಕರು, ಎಲ್ಲ ಕಡೆ ಗ್ರಾಮೀಣ ಟಾಸ್ಕ್ ಫೋರ್ಸ್ ಸದಸ್ಯರೊಂದಿಗೆ ಕೋರೋನಾ ವೈರಸ್ ಕುರಿತು ಜಾಗೃತಿ ಮೂಡಿಸುವ ಹಾಗೂ ಪರೀಶೀಲನಾ ಸಭೆ ನಡೆಸಿ, ನಂತರ ಗ್ರಾಮದ ಜನತೆಗೆ ಮಾಸ್ಕ್ ಗಳನ್ನು ಹಾಗೂ ಗ್ರಾಮೀಣ ಕಾರ್ಯಪಡೆ ಗೆ ಟೋಪಿಗಳನ್ನು ವಿತರಿಸಲಾಯಿತು.
ಕೊರೋನಾ ಮಹಾಮಾರಿ ಹೋಗಲಾಡಿಯಲು ತೆಗೆದುಕೊಳ್ಳಬೇಕಾದ ಮುಂಜಾಗ್ರತೆ ಕ್ರಮಗಳ ಕುರಿತು ತಿಳಿ ಹೇಳಿದ ದೊಡ್ಡಗೌಡರ್, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸಲಹೆ ನೀಡಿದರು.
ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೊರೋನಾ ಹೋಗಲಾಡಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಜನರು ಅವುಗಳನ್ನು ಕಟ್ಟುನಿಟ್ಟಾಗಿ ಪಾಲಬೇಕು ಎಂದು ಸೂಚಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ