
ಪ್ರಗತಿವಾಹಿನಿ ಸುದ್ದಿ : ಹೇಮಾವತಿ ನೀರಿಗಾಗಿ, ತಾಲೂಕಿನ ರೈತರ ಕ್ಷೇಮಕ್ಕಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳಲೂ ಸಹ ಸಿದ್ದ ಎಂದು ತುಮಕೂರಿನ ಕುಣಿಗಲ್ ಶಾಸಕ ಡಾ. ರಂಗನಾಥ್ ಹೇಳಿದ್ದಾರೆ.
ಎಲೆಯೂರಿನಲ್ಲಿ ನಡೆದ ವೈ.ಕೆ ರಾಮಯ್ಯ ಹೇಮಾವತಿ ಹೋರಾಟ ಸಮಿತಿ ಕಾರ್ಯಕ್ರಮದಲ್ಲಿ ಹೇಮಾವತಿ ಲಿಂಕ್ ಕೆನಾಲ್ ವಿಚಾರವಾಗಿ ಹೇಳಕೆ ನೀಡಿದ ಅವರು, ನೀವು ಪೈಪ್ ಲೈನ್ ಕಾಮಗಾರಿಗೆ ಅಡ್ಡಿ ಪಡಿಸಲಿಕ್ಕೆ ನಿಂತರೆ ನಾನು ದೇಹತ್ಯಾಗಕ್ಕೂ ಸಿದ್ಧ. ನಮ್ಮ ತಾಲೂಕಿನ ರೈತರಿಗಾಗಿ ತಗ್ಗಿ-ಬಗ್ಗಿ ನಡೆಯಲಿಕ್ಕೆ ಸಿದ್ಧನಿದ್ದೇನೆ. ಕುಣಿಗಲ್ ತಾಲೂಕಿನ ನಾವು ಗಂಡು ಮಕ್ಕಳು. ಕಚ್ಚೆ ಕಟ್ಟಿ ಹೋರಾಟ ಮಾಡೋಕೆ ತಯಾರಿದ್ದೇವೆ. ಮುಂದಿನ ದಿನಗಳಲ್ಲಿ ಬೀದಿಗೆ ಇಳಿಯುತ್ತೇವೆ ಎಂದರು.
ನಮ್ಮ ತಾಲೂಕಿನ ನೀರಿಗಾಗಿ ಹೋರಾಟ ಮಾಡ್ತೀವಿ. ನಾನು ಸಹ ಕುಣಿಗಲ್ ತಾಲೂಕಿನ ಮಗನಾಗಿ ಆತ್ಮಹತ್ಯೆ ಮಾಡಿಕೊಳ್ಳಲೂ ಸಹ ಹಿಂಜರಿಯುವುದಿಲ್ಲ ಎಂದು ಎಂಎಲ್ಎ ರಂಗನಾಥ್ ಹೇಳಿದರು.