Kannada NewsKarnataka NewsLatest

ತುರ್ತು ಸಭೆ ನಡೆಸಿದ ಶಾಸಕ ಗಣೇಶ ಹುಕ್ಕೇರಿ

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ – ಕೊರೋನಾ ವೈರಸ್ ಅತಿ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಶಾಸಕ ಗಣೇಶ ಹುಕ್ಕೇರಿ ಚಿಕ್ಕೋಡಿಯಲ್ಲಿ ತುರ್ತು ಸಭೆ ನಡೆಸಿದರು.

ಕರೊನಾವೈರಸ್ ಹಬ್ಬುವುದನ್ನು ತಡೆಗಟ್ಟಲು ಕ್ರಮ ತೆಗೆದುಕೊಳ್ಳುವ ಕುರಿತು ಅಧಿಕಾರಿಗಳೊಂದಿಗೆ ಸುದೀರ್ಘವಾಗಿ ಚರ್ಚಿಸಿದ ಶಾಸಕರು, ಮನೆಯಿಂದ ಯಾರೂ ಹೊರಗಡೆ ಬರದಂತೆ ವಿನಂತಿಸಿದರು. ಅತಿ ಅವಶ್ಯಕ ಕೆಲಸವಿದ್ದರೆ ಮಾತ್ರ ಹೊರಗಡೆ ಬನ್ನಿ ಮತ್ತು ಜನಸಂದಣಿ ಪ್ರದೇಶದಿಂದ ಆದಷ್ಟು ದೂರವಿರಿ ಎಂದು ಜನರಲ್ಲಿ ವಿನಂತಿಸಿದರು.

ದೇಶದಲ್ಲಿ ಈ ಕೊರೊನಾ 3ನೇ ಹಂತದಲ್ಲಿದ್ದು ಇದನ್ನು ಇಲ್ಲಿಗೆ ತಡೆಯಬೇಕಾಗಿದೆ. ನಿಮ್ಮೆಲ್ಲರ ರಕ್ಷಣೆ ನಮ್ಮ ಆದ್ಯ ಕರ್ತವ್ಯವಾಗಿದೆ. ಎಲ್ಲರೂ ಸಹಕರಿಸಬೇಕೆಂದು ಸಾರ್ವಜನಿಕರಲ್ಲಿ  ಕಳಕಳಿಯ ವಿನಂತಿ  ಮಾಡಿಕೊಂಡರು.

ಈ ಸಂದರ್ಭದಲ್ಲಿ ಚಿಕ್ಕೋಡಿ ತಾಲ್ಲೂಕಿನ ಎಲ್ಲಾ ವೈದ್ಯರು,  ಉಪವಿಭಾಗಾದಿಕಾರಿಗಳು , ತಹಶೀಲ್ದಾರ , ಸಿ ಪಿ ಐ , ಟಿ.ಎಚ್.ಓ.  ಮತ್ತು ಎಲ್ಲ ಅಧಿಕಾರಿಗಳು ಉಪಸ್ಥಿತರಿದ್ದರು.

Home add -Advt

Related Articles

Back to top button