
ಸೇವಾಯಾನ ಡಾ. ಎಂ. ಎಲ್. ತುಕ್ಕಾರ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇದೇ ದಿ. ೬ ರವಿವಾರ ಬೆಳಿಗ್ಗೆ ೧೧-೩೦ ಕ್ಕೆ ಗಾಂಧಿನಗರದಲ್ಲಿರುವ ಹೊಟೇಲ್ ಸಂಕಮ್ ಸಭಾಭವನದಲ್ಲಿ ನೀರಜಾ ಗಣಾಚಾರಿ ಬರೆದಿರುವ ಡಾ. ಎಂ. ಎಲ್. ತುಕ್ಕಾರ ಅವರ ಆತ್ಮ ಚರಿತ್ರೆ ಸೇವಾಯಾನ ಕೃತಿ ಬಿಡುಗಡೆ ಕಾರ‍್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಆರ್. ಪಿ. ಡಿ. ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯರಾದ ಡಾ. ಶ್ರೀನಿವಾಸ ಕುಲಕರ್ಣಿ ಕೃತಿ ಬಿಡುಗಡೆಗೊಳಿಸಲಿದ್ದಾರೆ. ಕೃತಿಯ ಕುರಿತು ಹಿರಿಯ ಪತ್ರಕರ್ತ ರಾಘವೇಂದ್ರ ಜೋಶಿ ಮಾತನಾಡಲಿದ್ದು ಅಧ್ಯಕ್ಷತೆಯನ್ನು ಹಿರಿಯ ನ್ಯಾಯವಾದಿ ಎಸ್. ಎಂ. ಕುಲಕರ್ಣಿ ವಹಿಸಲಿದ್ದಾರೆ.