Kannada NewsKarnataka NewsLatest

ಸಮುದಾಯ ಭವನ ನಿರ್ಮಾಣಕ್ಕೆ ಚಾಲನೆ ನೀಡಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ

ಪ್ರಗತಿವಾಹಿನಿ ಸುದ್ದಿ, ಹಿರೇಬಾಗೇವಾಡಿ: ಗ್ರಾಮದಲ್ಲಿ ಮುಸ್ಲಿಂ ಸಮಾಜದ ನೂತನ ಸಮುದಾಯ ಭವನದ ನಿರ್ಮಾಣಕ್ಕೆ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರು ಭೂಮಿ ಪೂಜೆ ಕೈಗೊಂಡು ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಲಕ್ಷ್ಮೀ ಹೆಬ್ಬಾಳಕರ, “ಸಮುದಾಯ ಭವನ ಕಟ್ಟಡದ ಪೂಜೆಯ ಕಾರ್ಯದಲ್ಲಿ ಮುಸ್ಲಿಂ ಸಮುದಾಯದವರ ಜತೆ ಹಿಂದೂಗಳೂ ಕೈಜೋಡಿಸುವ ಮೂಲಕ ಭಾವ್ಯೆಕ್ಯತೆಗೆ ಸಾಕ್ಷಿಯಾಗುತ್ತಿದ್ದಾರೆ. ಗ್ರಾಮದಲ್ಲಿ ಹಿಂದೂ- ಮುಸ್ಲಿಂ ಭಾವೈಕ್ಯತೆ ಹಿಂದಿನಿಂದಲೂ ಇರುವುದು ಕ್ಷೇತ್ರದ ಶಕ್ತಿಯಾಗಿ ಹೊರಹೊಮ್ಮಿದೆ. ಇವತ್ತಿನ ಇದೇ ಸಮಯದಲ್ಲಿ ರಂಜಾನ್ ಉಪವಾಸದ ಪೂರ್ವದಲ್ಲಿ ಚಂದ್ರನ ದರ್ಶನವಾಗಿದ್ದು, ರಂಜಾನ್ ಹಬ್ಬದ ಮೆರುಗನ್ನು ಇನ್ನಷ್ಟು ಇಮ್ಮಡಿಗೊಳಿಸಿದೆ” ಎಂದರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ದರ್ಗಾ ಅಜ್ಜನವರಾದ ಅಶ್ರಫ್ ಪೀರ್ ಖಾರ್ದಿ, ಸ್ವಾತಿ ಇಟಗಿ, ನಾಜರೀನ್ ಬಾನು ಕರಿದಾವಲ್, ಸಿಸಿ ಪಾಟೀಲ ಅಣ್ಣ, ಸುರೇಶ ಇಟಗಿ, ಅಡಿವೇಶ ಇಟಗಿ, ಶ್ರೀಕಾಂತ ಮಾದುಭರಮಣ್ಣವರ, ನಿಂಗಪ್ಪ ತಳವಾರ, ಐ.ಬಿ.ಅರಳೀಕಟ್ಟಿ, ಗೌಸ ಜಾಲಿಕೊಪ್ಪ, ಸೈಯಿದ್ ಸನದಿ, ಕತಾಲ್ ಬಿ. ಗೋವೆ, ಮನ್ಸೂರ್ ಅತ್ತಾರ, ಬಸವರಾಜ ತೋಟಗಿ, ಹಿರೇ ಬಾಗೇವಾಡಿಯ ಜಮಾತದ ಎಲ್ಲ ಹಿರಿಯರು ಉಪಸ್ಥಿತರಿದ್ದರು.

https://pragati.taskdun.com/siddaramaiahcm-basavaraj-bommaistate-govtjob-advertisement/
https://pragati.taskdun.com/state-child-honor-award-for-tulsi/
https://pragati.taskdun.com/karnataka-vidhanasabha-electionelection-commissionlatter/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button