Kannada NewsKarnataka NewsLatest

ಕೆಕೆ ಕೊಪ್ಪದಲ್ಲಿ ರಸ್ತೆಗಳ ಅಭಿವೃದ್ಧಿಗೆ ಚಾಲನೆ ನೀಡಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: “ನನ್ನ ಶಾಸಕತ್ವದ ಮೊಟ್ಟಮೊದಲ ಒಂದು ಅವಧಿಯನ್ನು ಸಂಪೂರ್ಣ ಜನಸೇವೆಗೆ ಮೀಸಲಿಟ್ಟು ಅಭಿವೃದ್ಧಿ ಕಾರ್ಯಗಳಿಂದ ಕ್ಷೇತ್ರದ ಜನತೆಯ ಪಾಲಿನ ಮನೆಮಗಳಾಗಿದ್ದೇನೆ. ಜನತೆ ಈವರೆಗೂ ಕೊಟ್ಟ ಪ್ರೀತಿ, ವಿಶ್ವಾಸಗಳನ್ನು ಹೀಗೆಯೇ ಮುಂದುವರಿಸಿ ಕೈ ಬಿಡದೆ ನಡೆಸಿದರೆ ಇಡೀ ಕ್ಷೇತ್ರವನ್ನು ಮುಂದೆ ನಿಂತು ಮುನ್ನಡೆಸಿ ಮಾದರಿಯಾಗಿಸುವ ಹೊಣೆ ನನ್ನದು” ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.

ಅವರು ಬೆಳಗಾವಿ ಗ್ರಾಮೀಣ ಕ್ಷೇತ್ರದ ಕೆಕೆ ಕೊಪ್ಪ ಗ್ರಾಮದ ಗೋಕುಲ ನಗರದಲ್ಲಿನ ರಸ್ತೆಗಳ ಅಭಿವೃದ್ಧಿಗಾಗಿ ಪಂಚಾಯತ ರಾಜ್ ಇಂಜಿನಿಯರಿಂಗ್ ಇಲಾಖೆಯ 40 ಲಕ್ಷ ರೂ. ವೆಚ್ಚದ ಕಾಂಕ್ರೀಟ್ ರಸ್ತೆ ನಿರ್ಮಾಣದ ಕಾಮಗಾರಿಗಳಿಗೆ ಇಂದು ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

“ಪ್ರತಿಪಕ್ಷದ ಶಾಸಕಿಯಾಗಿಯೂ ನನ್ನ ಶಕ್ತಿ ಮೀರಿ ಅನುದಾನ ತರುವ ಮೂಲಕ ಕ್ಷೇತ್ರದಲ್ಲಿ ಅಭೂತಪೂರ್ವ ಅಭಿವೃದ್ಧಿಯನ್ನು ಮಾಡಿ ತೋರಿಸಿದ್ದೇನೆ. ಅಭಿವೃದ್ಧಿಯ ಕಾರ್ಯಗಳೆಲ್ಲವೂ ಕಣ್ಣಿಗೆ ಗೋಚರಿಸುವಂತಿರುವುದರಿಂದ ಯಾರದೇ ಟೀಕೆ, ಟಿಪ್ಪಣಿ ಬಂದರೂ ಅದು ಕೇವಲ ರಾಜಕೀಯ ಕಾರಣಕ್ಕೆ. ಈ ವಿಷಯವನ್ನು ಕ್ಷೇತ್ರದ ಜನ ಕೂಡ ಚೆನ್ನಾಗಿ ಅರಿತಿದ್ದು ಈ ಮನೆಮಗಳ ಮೇಲಿನ ಜನತೆಯ ಮಮತೆ ಎಂದಿಗೂ ಕಳೆದು ಹೋಗುವುದಿಲ್ಲ ಎಂಬ ಸಂಪೂರ್ಣ ವಿಶ್ವಾಸದಿಂದ ಮುಂದಡಿ ಇಡುತ್ತಿದ್ದೇನೆ” ಎಂದು ಅವರು ಹೇಳಿದರು.

ಈ ಸಮಯದಲ್ಲಿ ಚಂಬಯ್ಯ ಹಿರೇಮಠ ಗದಗಯ್ಯ ಹಿರೇಮಠ ಭೀಮಪ್ಪ ಬಾನಿ, ಗಂಗಪ್ಪ ಮಾಸ್ತಮರ್ಡಿ, ಬಸವರಾಜ್ ತೊಲಗಿ ಮುಂತಾದವ

Home add -Advt

ರು ಉಪಸ್ಥಿತರಿದ್ದರು.

https://pragati.taskdun.com/i-have-fulfilled-my-vow-even-in-the-midst-of-hardship-bless-me-again-lakshmi-hebbalkar-request/

https://pragati.taskdun.com/white-field-kr-purammetroinaugurationpm-modibangalore/
https://pragati.taskdun.com/amrita-mahotsava-of-independence-k-s-r-p-awarding-medals-to-officers-and-staff/

Related Articles

Back to top button