Kannada NewsKarnataka NewsLatest

4 ಕೋಟಿ ರೂ. ವೆಚ್ಚದಲ್ಲಿ ಎಪಿಎಂಸಿ ಅಭಿವೃದ್ಧಿ ಕೆಲಸಕ್ಕೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಚಾಲನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –  ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯನ್ನು ಅಭಿವೃದ್ಧಿ ಪಡಿಸುವ ದೃಷ್ಟಿಯಿಂದ 4 ಕೋಟಿ ರೂ,ಗಳ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಮಂಗಳವಾರ ಚಾಲನೆ ನೀಡಿದರು.
 ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ಸಗಟು ತರಕಾರಿ ಮಾರುಕಟ್ಟೆ, ಬ್ಲಾಕ್ “ಡಿ” ನಲ್ಲಿ 35  ಅಂಗಡಿಗಳ ನಿರ್ಮಾಣ ಹಾಗೂ ಇವುಗಳಿಗೆ ಹೊಂದಿಕೊಂಡಂತೆ ಆರ್ ಸಿ ಸಿ‌ ಗಟಾರ, ಕಾಂಕ್ರೀಟ್ ರಸ್ತೆ, ಸಗಟು ತರಕಾರಿ ಮಾರುಕಟ್ಟೆ ಬ್ಲಾಕ್ “ಎ” ನಲ್ಲಿನ ನೆಲಮಾಳಿಗೆಯಲ್ಲಿ 18 ಮಳಿಗೆಗಳನ್ನು ನಿರ್ಮಿಸುವುದು, ಜೊತೆಗೆ ರೈತ ಭವನ ಕಟ್ಟಡ ಹಾಗೂ ಅತಿಥಿ ಗೃಹಗಳ ನವೀಕರಣದ ಕಾಮಕಾರಿಗಳಿಗೆ ಅಡಿಗಲ್ಲನ್ನಿಡಲಾಯಿತು.
ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ  ಯುವರಾಜ ಕದಂ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಅರುಣ ಕಟಾಂಬಳೆ, ಎಪಿಎಂಸಿ ಸದಸ್ಯರುಗಳಾದ ಸುಧೀರ್ ಗಡ್ಡೆ, ಸಂಜು ಮಾದರ್, ಆನಂದ ಪಾಟೀಲ, ಮನೋಜ ಮತ್ತಿಕೊಪ್ಪ, ಆರ್ ಕೆ ಪಾಟೀಲ, ಲಗಮಣ್ಣ ನಾಯ್ಕ, ಪಡಿಗೌಡ ಪಾಟೀಲ, ಮಹೇಶ ಗೋವೆಕರ್, ಮಹೇಶ ಗುಬ್ಜಿ, ನಿಂಗಪ್ಪ ಬಸ್ಸಾಪುರ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button