ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಒಟ್ಟೂ 1.10 ಕೋಟಿ ರೂ. ವೆಚ್ಚದಲ್ಲಿ ದೇಸೂರ ಗ್ರಾಮದ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಶನಿವಾರ ಚಾಲನೆ ನೀಡಿದರು.
ಗ್ರಾಮದ ಪ್ರಮುಖ ರಸ್ತೆಗಳ ಅಭಿವೃದ್ಧಿಗೆ ಕರ್ನಾಟಕ ನೀರಾವರಿ ನಿಗಮದ ವತಿಯಿಂದ 60 ಲಕ್ಷ ರೂ,ಗಳು ಮಂಜೂರಾಗಿವೆ. ಈ ಯೋಜನೆಯಲ್ಲಿ ಗ್ರಾಮದ ಮಂಗಾಯಿ ಗಲ್ಲಿ ರಸ್ತೆ, ಶ್ರೀರಾಮ ನಗರ, ಗ್ರೇವ್ ಯಾರ್ಡ್ ರಸ್ತೆ ಹಾಗೂ ಪಾಟೀಲವಾಡಾ ರಸ್ತೆಗಳು ನಿರ್ಮಾಣವಾಗಲಿವೆ.
ಮಾವುಲಿ ಸಾತೇರಿ ದೇವಸ್ಥಾನಕ್ಕೆ ಸಾಗುವ ರಸ್ತೆ ಹಾಗೂ ಮಹಾತ್ಮಾ ಫುಲೆ ರಸ್ತೆಯ ಅಭಿವೃದ್ಧಿಯನ್ನು ಸಹ ಕೈಗೆತ್ತಿಕೊಂಡಿದ್ದು, ಪಂಚಾಯತ ರಾಜ್ ಇಂಜಿನಿಯರಿಂಗ್ ಇಲಾಖೆಯ ವತಿಯಿಂದ 50 ಲಕ್ಷ ರೂ,ಗಳು ಮಂಜೂರಾಗಿದ್ದು, ರಸ್ತೆ ಹಾಗೂ ಗಟಾರಗಳ ನಿರ್ಮಾಣದ ಕಾಮಗಾರಿಗಳಿಗೂ ಸಹ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಚಾಲನೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಯುವರಾಜ ಕದಂ, ಜಿ ಕೆ ಪಾಟೀಲ, ಭರಮಾ ಪಾಟೀಲ, ಮೃಣಾಲ ಹೆಬ್ಬಾಳಕರ್, ಅನಿಲ ಪಾಟೀಲ, ಸಾತೇರಿ ಕಳಸೇಕರ್, ವೆಂಕಟ್ ಪಾಟೀಲ, ಸಂತೋಷ ಮರಗಾಳೆ, ಸಂಕೇತ ಪಾಟೀಲ, ಸತೀಶ ಚವ್ಹಾಣ, ದಾಜಿಬಾ ಛತ್ರೆ, ಅರವಿಂದ ಪಾಟೀಲ, ಕೆ ಎನ್ ಎನ್ ಎಲ್ ಇಂಜಿನಿಯರ್ ಗಳಾದ ಪತ್ತಾರ, ಕೇದರ್ಜಿ, ಪಿ ಆರ್ ಇ ಡಿ ಇಂಜಿನಿಯರ್ ಡಿ ಎಮ್ ಬನ್ನೂರ, ಎ ಇ ಸಿ ಓ ನಂದಕಿಶೋರ್ ವಾಘವಾಡಿ, ಸಿ ಓ ಶಶಿಕಿರಣ, ಅನೇಕ ಮಹಿಳೆಯರು, ಕಾರ್ಯಕರ್ತರು ಉಪಸ್ಥಿತರಿದ್ದರು.
ನಾಲಾ ದುರಸ್ತಿ ಕಾಮಗಾರಿ
ಬೆಳಗಾವಿ ಗ್ರಾಮೀಣ ಕ್ಷೇತ್ರದ ಜಯನಗರದ ಟೀಚರ್ಸ್ ಕಾಲೋನಿಯ ನಾಲಾ ರಿಪೇರಿಯ ಕಾಮಗಾರಿಗಳಿಗೆ 15 ನೇ ಹಣಕಾಸಿನ ಯೋಜನೆಯಡಿಯಲ್ಲಿ ಮಹಾನಗರ ಪಾಲಿಕೆಯ ವತಿಯಿಂದ 19 ಲಕ್ಷ ರೂ,ಗಳು ಬಿಡುಗಡೆಯಾಗಿದ್ದು, ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಹಾಗೂ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಸೇರಿ ಚಾಲನೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಟೀಚರ್ಸ್ ಕಾಲೋನಿಯ ಹಾಗೂ ಸಂಕಲ್ಪ ಲೇ ಔಟ್ ನಾಗರಿಕರು ಉಪಸ್ಥಿತರಿದ್ದರು.
ಸುಳಗಾ ಗ್ರಾಮದ ರಸ್ತೆ ಅಭಿವೃದ್ಧಿ
ಕ್ಷೇತ್ರದ ಸುಳಗಾ ಗ್ರಾಮದಲ್ಲಿ ರಸ್ತೆಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ, ಕರ್ನಾಟಕ ನೀರಾವರಿ ನಿಗಮ ನಿಯಮಿತದ ವತಿಯಿಂದ 41 ಲಕ್ಷ ರೂ,ಗಳು ಹಾಗೂ ಪಂಚಾಯತ ರಾಜ ಇಂಜಿನಿಯರಿಂಗ್ ಇಲಾಖೆಯ ವತಿಯಿಂದ 22 ಲಕ್ಷ ರೂ,ಗಳು ಮಂಜೂರಾಗಿದ್ದು, ಕಾಂಕ್ರೀಟ್ ರಸ್ತೆ ನಿರ್ಮಾಣ ಹಾಗೂ ಪೇವರ್ಸ್ ಅಳವಡಿಕೆಯ ಕಾಮಗಾರಿಗಳಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರ ಅನುಪಸ್ಥಿತಿಯಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಎಪಿಎಂಸಿ ಅಧ್ಯಕ್ಷ ಯುವರಾಜ ಕದಂ, ಮೃಣಾಲ ಹೆಬ್ಬಾಳಕರ್ ಸೇರಿ ಅಧಿಕೃತವಾಗಿ ಚಾಲನೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ನಂದಕಿಶೋರ್ ವಾಘವಾಡೆ, ಇಂಜಿನಿಯರ್ ವಿ ಜೆ ಪತ್ತಾರ, ಬಿ ಎಸ್ ಕೇದರ್ಜಿ, ಗಂಗವ್ವ ನಾಯ್ಕ್, ಅರವಿಂದ ಪಾಟೀಲ, ಪಿಡಿಓ ದುರ್ಗಪ್ಪ ತಹಶಿಲ್ದಾರ, ಅಶೋಕ ಪಾಟೀಲ, ಹನಮಂತ ಪಾಟೀಲ, ಹನಮಂತ ಬೋರಗ್, ಯಮುನಾ ಪಾಟೀಲ, ಪ್ರಭಾಕರ್ ನಾವ್ಗೆಕರ್ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ