Latest

ಪ್ರೇಮಿಗಳ ದಿನ ಹುಟ್ಟಿದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಪ್ರೀತಿಸಿದ್ದು ಯಾರನ್ನು?

ಇಂದು ಪ್ರೇಮಿಗಳ ದಿನ

ಪ್ರೀತಿಸಿದವರಿಗಾಗಿ ತಮ್ಮ ಜನ್ಮದಿನವನ್ನೇ ಬದಲಾಯಿಸಿಕೊಂಡ ಶಾಸಕಿ!

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ, ರಾಜ್ಯ ಮಹಿಳಾ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳಕರ್ ಹುಟ್ಟಿದ್ದು ಪ್ರೇಮಿಗಳ ದಿನ, ಫೆಬ್ರವರಿ 14ರಂದು.

ಆದರೆ ಅವರು ತಾವು ಪ್ರೀತಿಸಿದವರಿಗಾಗಿ ತಮ್ಮ ಜನ್ಮದಿನವನ್ನೇ ಬದಲಾಯಿಸಿಕೊಂಡಿದ್ದಾರೆ!

Home add -Advt

ಕಳೆದ ವರ್ಷದವರೆಗೂ ಅವರು ಪ್ರೇಮಿಗಳ ದಿನವೇ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತ ಬಂದಿದ್ದಾರೆ. ಮದುವೆಯಾಗಿ ಓರ್ವ ಮಗನನ್ನೂ ಹೊಂದಿರುವ ಲಕ್ಷ್ಮಿ ಹೆಬ್ಬಾಳಕರ್ 2018ರ ಮೇ 12ರಂದು ಪ್ರೀತಿಯ ಮಾಯೆಯಲ್ಲಿ ಸಿಲುಕಿದ್ದಾರೆ.

 

ಹಾಗಾಗಿ ಅವರು ತಮ್ಮ ಜನ್ಮದಿನವನ್ನೇ ಫೆ.14ರ ಬದಲಾಗಿ ಮೇ 12 ಕ್ಕೆ ಬದಲಾಯಿಸಿಕೊಂಡಿದ್ದಾರೆ. ಹಾಗಾದರೆ ಅವರ ಪ್ರೇಮಿ ಯಾರು? ಮೇ 12ರಂದು ಪ್ರೀತಿಸಿದ್ದು ಹೇಗೆ ಗೊತ್ತೆ?

ಕಳೆದ ವರ್ಷ ಮೇ 12ರಂದು ವಿಧಾನಸಭೆ ಚುನಾವಣೆ ಫಲಿತಾಂಶ ಘೋಷಣೆಯಾಗಿದೆ. ಅಂದು ಅವರು ಒಂದು ಲಕ್ಷಕ್ಕೂ ಹೆಚ್ಚು ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ. ಗ್ರಾಮೀಣ ಕ್ಷೇತ್ರದಲ್ಲಿ ಮೊದಲ ಬಾರಿಗೆ ನಿಂತಾಗ ಅವರು ಸೋತಿದ್ದರು. ನಂತರ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿಯೂ ಸೋತಿದ್ದರು. 

ಹಾಗಾಗಿ ಕಳೆದ ಬಾರಿ ಮತ್ತೊಮ್ಮೆ ಸ್ಪರ್ಧಿಸಿ ಗೆದ್ದಿದ್ದರಿಂದ ಅದು ತಮ್ಮ ಮರು ಜನ್ಮ ಎಂದು ಹೇಳಿಕೊಂಡ ಲಕ್ಷ್ಮಿ ಹೆಬ್ಬಾಳಕರ್, ತಮಗೆ ಮರು ಜನ್ಮ ಕೊಟ್ಟ ಮತದಾರರ ಮೇಲಿನ ಪ್ರೀತಿಗಾಗಿ ಮೇ 12ರಂದೇ ಇನ್ನು ಮುಂದೆ ಹುಟ್ಟು ಹಬ್ಬ ಆಚರಿಸಿಕೊಳ್ಳುವುದಾಗಿ ಘೋಷಿಸಿದರು. 

ಮತದಾರರಿಗೊಸ್ಕರ ಜನ್ಮ ದಿನವನ್ನೇ ಬದಲಾಯಿಸಿಕೊಂಡಿದ್ದು ಇತಿಹಾಸದಲ್ಲೇ ಇದು ಮೊದಲು.

ಜನರಿಗಾಗಿ ಜನ್ಮ ದಿನ ಬದಲಿಸಿಕೊಂಡು ಇತಿಹಾಸ ಸೃಷ್ಟಿಸಿದ ಶಾಸಕಿ

 

Related Articles

Back to top button