Kannada NewsKarnataka NewsLatest

​ಜೈನ ಸಮುದಾಯ ಭವನಕ್ಕೆ 28 ಲಕ್ಷ ರೂ. ಮಂಜೂರು ಮಾಡಿಸಿದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್   ​

15 ವರ್ಷಗಳ ಬೇಡಿಕೆ ಈಡೇರಿಸಿದ್ದಕ್ಕೆ ಶಾಸಕಿಯನ್ನು ಸನ್ಮಾನಿಸಿ, ಸಂಭ್ರಮಿಸಿದ ಗ್ರಾಮದ ಜೈನ್ ಸಮುದಾಯದ ಮುಖಂಡರು

ಪ್ರಗತಿವಾಹಿನಿ ಸುದ್ದಿ, ​ಬೆಳಗಾವಿ ​– ಬೆಳಗಾವಿ ಗ್ರಾಮೀಣ​ ಕ್ಷೇತ್ರದ ಮುತಗಾ ಗ್ರಾಮದ​ಲ್ಲಿ ಜೈನ ಸಮುದಾಯ ಭವನ ನಿರ್ಮಾಣಕ್ಕೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರು ವಿಶೇಷ ಅನುದಾನ ಮಂಜೂರು ಮಾಡಿಸಿದ್ದು, ಆದೇಶಪತ್ರವನ್ನು ಶುಕ್ರವಾರ ಜೈನ ಸಮುದಾಯದ ಪ್ರತಿನಿಧಿಗ​ಳಿಗೆ ಹಸ್ತಾಂತರಿಸಿದರು.
 
ಗ್ರಾಮದ ಜೈನ ಸಮುದಾಯದ ಪ್ರತಿನಿಧಿಗಳು ಲಕ್ಷ್ಮಿ ಹೆಬ್ಬಾಳಕರ್ ಅವರನ್ನು ಭೇಟಿ ಮಾಡಿ ಗ್ರಾಮಕ್ಕೊಂದು ಜೈನ ಸಮುದಾಯ ಭವನ ಮಂಜೂರು ಮಾಡಿಸಬೇಕೆನ್ನುವ ಬೇಡಿಕೆ ಇಟ್ಟಿದ್ದರು. 
ಇದು ಅವರ ​​ಕಳೆದ ಸುಮಾರು ​15​ ವರ್ಷಗ​ಳ​ ಬೇಡಿಕೆಯಾಗಿ​ತ್ತು.
 ಗ್ರಾಮಸ್ಥರ ಬೇಡಿಕೆಯಂತೆ ಪ್ರಸ್ತಾವನೆ ಸಿದ್ದಪಡಿಸಿದ ಲಕ್ಷ್ಮಿ ಹೆಬ್ಬಾಳಕರ್ ಅಲ್ಪಸಂಖ್ಯಾತರ ಇಲಾಖೆ ವತಿಯಿಂದ ​28 ಲಕ್ಷ ರೂ​. ಮಂಜೂರು ಮಾಡಿಸಿ,  ಆದೇಶ ಪತ್ರವನ್ನು ಹೊರಡಿಸುವುದರಲ್ಲಿ ಯಶಸ್ವಿಯಾಗಿ​ದ್ದಾರೆ.​
​“ಶುಕ್ರವಾರ ಆದೇಶ ಪತ್ರದ ಪ್ರತಿಯನ್ನು ​ಸಮುದಾಯದ ಮುಖಂಡರಿಗೆ ಹಸ್ತಾಂತರಿ​ಸಿದೆ.​ ಈ ​ಸಂದರ್ಭದಲ್ಲಿ ಅವರ ಮುಖದಲ್ಲಿನ ಮಂದಹಾಸವನ್ನು ನೋಡಿ ಖುಷಿಪಟ್ಟೆ​.​ ಜೊತೆಗೆ ಅವರ ಆತ್ಮೀಯ ಸನ್ಮಾನವನ್ನು ಸ್ವೀಕರಿಸಿದೆ​”​​ ಎಂದು ಲಕ್ಷ್ಮಿ ಹೆಬ್ಬಾಳಕರ್ ಪ್ರತಿಕ್ರಿಯಿಸಿದರು. ​

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button