Latest

ಶಾಪಿಂಗ್ ಮಾಲ್ ನಲ್ಲಿ ಬೆಂಕಿ ಅವಘಡ

ಪ್ರಗತಿವಾಹಿನಿ ಸುದ್ದಿ; ಬಾಗಲಕೋಟೆ: ಶಾಪಿಂಗ್ ಮಾಲ್ ನಲ್ಲಿ ಶಾರ್ಟ್ ರ್ಸಕ್ಯೊಟ್ ಉಂಟಾಗಿ ಇಡೀ ಕಟ್ಟಡ ಬೆಂಕಿಗೆ ಆಹುತಿ ಆಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ಲ ಪಟ್ಟಣದಲ್ಲಿ ನಡೆದಿದೆ.

ಇಳಕಲ್ಲ ಪಟ್ಟಣದ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಬಸವೇಶ್ವರ ಸರ್ಕಲ್ ಎದುರಿನ ನೂತನವಾಗಿ ನಿರ್ಮಾಣವಾಗಿದ್ದ ಸಜ್ಜನ ಶಾಂಪಿಂಗ್ ಸೆಂಟರ್ ಸಂಪೂರ್ಣ ಬೆಂಕಿಗೆ ಆಹುತಿಯಾಗಿದ್ದು, ಕೋಟ್ಯಾಂತರ ರೂಪಾಯಿ ವಸ್ತುಗಳು ಸುಟ್ಟು ಕರಕಲಾಗಿವೆ.

ಲಾಕ್ ಡೌನ್ ನಂತರ ‌ನೂತನ ಕಟ್ಟಡವು ಪ್ರಾರಂಭ ಮಾಡಲಾಗಿತ್ತು. ರೇಷ್ಮೆ ಸಿಲ್ಕ್, ಹಾರ್ಡವೇರ ಹಾಗೂ ಮೋರ್ ಶಾಪಿಂಗ್ ಮಾಲ್ ಸೇರಿದಂತೆ ಇತರ ಅಂಗಡಿಗಳು ಇದ್ದವು. ಮಾಲ್ ನಲ್ಲಿದ್ದ ಬಹುತೇಕ ಅಂಗಡಿಗಳು ಬೆಂಕಿಗೆ ಆಹುತಿ ಆಗಿರುವ ಪರಿಣಾಮ ಕೋಟ್ಯಾಂತರ ರೂಪಾಯಿಗಳ ನಷ್ಟ ಉಂಟಾಗಿದೆ.

ಸ್ಥಳಕ್ಕೆ ಅಗ್ನಿ ಶ್ಯಾಮಕ ದಳ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ನಡೆಸಿದ್ದಾರೆ. ಮಹೇಶಪ್ಪ ಸಜ್ಜನ ಅವರಿಗೆ ಸೇರಿದ ಮಾಲ್ ಇದಾಗಿದೆ. ಇಳಕಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Home add -Advt

Related Articles

Back to top button