Latest

ಪರಸ್ಪರ ವಿವಾಹವಾಗಿ ಮನೆಗೆ ಬಂದ ಯುವತಿಯರು

ಪ್ರಗತಿವಾಹಿನಿ ಸುದ್ದಿ; ಪಾಟ್ನಾ: ಯುವತಿಯರಿಬ್ಬರು ಮದುವೆಯಾಗಿ ಗ್ರಾಮಕ್ಕೆ ಆಗಮಿಸಿರುವ ಘಟನೆ ಬಿಹಾರದ ಬೇತಿಯಾ ಜಿಲ್ಲೆಯಲ್ಲಿ ನಡೆದಿದೆ. ಮದುವೆಯಾಗಿ ಬಂದ ಇಬ್ಬರು ಯುವತಿಯರನ್ನು ನೋಡಿ ಪೋಷಕರು ದಂಗಾಗಿದ್ದಾರೆ.

ಬೇತಿಯಾ ನಗರದ ಇಶರತ್ (ಪತ್ನಿ), ರಾಮನಗರದ ನಿವಾಸಿ ನಗ್ಮಾ ಖಾತೂನ್ (ಪತಿ) ಮದುವೆಯಾದ ಜೋಡಿ. ಇಬ್ಬರು ಯುವತಿಯರ ವಿವಾಹಕ್ಕೆ ಕುಟುಂಬಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು ಈ ಹಿನ್ನಲೆಯಲ್ಲಿ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು.

ಇದೀಗ ಈ ಜೋಡಿ ತಾವಿಬ್ಬರೂ ಕಾನೂನುಬದ್ಧವಾಗಿ ಜಲಂಧರ್ ನ್ಯಾಯಾಲಯದಲ್ಲಿ ಮದುವೆ ಆಗಿರುವುದಾಗಿ ತಿಳಿಸಿದ್ದಾರೆ.

ಇಶರತ್ ಹೇಳುವ ಪ್ರಕಾರ ತಾವಿಬ್ಬರು ನಾಲ್ಕು ವರ್ಷಗಳಿಂದ ಪ್ರೀರ್ತಿಸುತ್ತಿದ್ದೆವು. ಎರಡು ತಿಂಗಳ ಹಿಂದಷ್ಟೇ ಕಾನೂನು ಬದ್ಧವಾಗಿ ವಿವಾಹವಾಗಿದ್ದಾಗಿ ತಿಳಿಸಿದ್ದಾಳೆ. ಮದುವೆಯಾಗಿ ಬಂದ ಹಿನ್ನಲೆಯಲ್ಲಿ ಗ್ರಾಮಕ್ಕೆ ಸಿಹಿ ಹಂಚಿದ್ದಾಳೆ.

Home add -Advt

Related Articles

Back to top button