Kannada NewsLatest

*ಚಚಡಿ ಏತ ನೀರಾವರಿ ಕಾಮಗಾರಿಗೆ ಅಡಿಗಲ್ಲು ಹಾಕಿದ ಶಾಸಕ ಮಹಾಂತೇಶ ದೊಡ್ಡಗೌಡರ*

ಪ್ರಗತಿವಾಹಿನಿ ಸುದ್ದಿ; ನೇಸರಗಿ: ಜನಪ್ರತಿನಿಧಿಗಳು ಮಾಡಿದ ಜನಪರ ಕೆಲಸಗಳನ್ನು ಮೆಚ್ಚಿ ಜನರು ಹರಸಿ ಪ್ರೋತ್ಸಾಹಿಸುವ ಕಾರ್ಯ ಮಾಡಿದಾಗ ನಮ್ಮ ರಾಜಕೀಯ ಜನ್ಮ ಸಾರ್ಥಕವಾಗುತ್ತದೆ ಎಂದು ಚೆನ್ನಮ್ಮನ ಕಿತ್ತೂರ ಶಾಸಕರಾದ ಮಹಾಂತೇಶ ದೊಡ್ಡಗೌಡರ ಹೇಳಿದರು.

ವಣ್ಣೂರ ಗ್ರಾಮದ ಜತ್ತ ಜಾಂಬೊಟಿ ರಸ್ತೆ ಪಕ್ಕ ಕರ್ನಾಟಕ ನೀರಾವರಿ ಯೋಜನೆಯಲ್ಲಿ ಚಚಡಿ ಏತ ನೀರಾವರಿ ಯೋಜನೆಯಲ್ಲಿ ಬರುವ ಕಿತ್ತೂರ, ಬೈಲಹೊಂಗಲ, ಗೋಕಾಕ ತಾಲೂಕಿನ 25 ಕಿ ಮಿ ವ್ಯಾಪ್ತಿಯ 2000 ಹೆಕ್ಟೇರ್ ವಿಸ್ತೀರ್ಣ ನೀರಾವರಿ ವಿತರಣಾ ಕಾಲುವೆ ಕಾಮಗಾರಿಯ ಅಡಿಗಲ್ಲು ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಈ ಭಾಗದ ವಣ್ಣೂರ, ಮಾಸ್ತಮರಡಿ, ಗಜಮನಾಳ, ಸುಣಕುಂಪಿ, ಮೇಕಲಮರಡಿ, ಕಲಕುಪ್ಪಿ, ಹಣಬರಹಟ್ಟಿ ಗ್ರಾಮಗಳ ಹೊಲಗದ್ದೆಗಳಿಗೆ ನೀರು ಒದಗಿಸುವ ಬಹು ಕಾಲದ ರೈತರ ಬೇಡಿಕೆಯಾಗಿದ್ದ ಚಚಡಿ ಏತ ನೀರಾವರಿ ಯೋಜನೆಯ ಅನುಷ್ಠಾನದಿಂದ ರೈತರಿಗೆ ನಾವು 2018 ರ ಚುನಾವಣೆಯಲ್ಲಿ ಕೊಟ್ಟ ಮಾತು ಇಡೇರಿದಂತಾಗಿದ್ದು. ಮಾರ್ಕಂಡೇಯ ನದಿಯಿಂದ ಈ ಭಾಗಕ್ಕೆ ನೀರು ಬರುವ ಹಂತದಲ್ಲಿದೆ. ಮತ್ತು ಈ ಯೋಜನೆಯಗೆ ಯಡಿಯೂರಪ್ಪ ಸರ್ಕಾರದಲ್ಲಿ ಸಚಿವ ರಮೇಶ ಜಾರಕಿಹೊಳಿ ಈಗ ಬೊಮ್ಮಾಯಿ ಸರ್ಕಾರದಲ್ಲಿ ನೀರಾವರಿ ಸಚಿವರಾದ ಗೋವಿಂದ ಕಾರಜೋಳ ಅವರ ಸಹಕಾರದಿಂದ 25 ಕೋಟಿ ರೂಪಾಯಿ ಮತ್ತು ವಿತರಣಾ ಕಾಲುವೆ ನಿರ್ಮಾಣಕ್ಕೆ 12.44 ಕೋಟಿ ರೂಪಾಯಿ, ಮಹತ್ವಾಕಾಂಕ್ಷೆಯ ಕೆರೆತುಂಬುವ ಯೋಜನೆಯ ನೀರಾವರಿ ಪಂಪಹೌಸಗೆ 15 ಕೋಟಿ,ವಣ್ಣೂರ ಗ್ರಾಮದಲ್ಲಿ ಮುಕ್ತಾಯದ ಹಂತದಲ್ಲಿರುವ 23 ಕೋಟಿ ರೂಪಾಯಿಗಳ ಅಂಬೇಡ್ಕರ್ ವಸತಿ ಶಾಲೆ ನಿರ್ಮಾಣ ಈ ಭಾಗದ ಎಲ್ಲಾ ಸಮಾಜದ ಸಮುಧಾಯ ಭವನ ನಿರ್ಮಾಣ, ಮಹತ್ವಾಕಾಂಕ್ಷೆಯ 520 ಕೋಟಿ ರೂಪಾಯಿಗಳ ನೀರಾವರಿ ಯೋಜನೆಯಾದ ನೇಸರಗಿ ಭಾಗದ ಶ್ರೀ ಚನ್ನವೃಷಬೇಂದ್ರ ಏತ ನೀರಾವರಿ ಯೋಜನೆಗೆ ಮಂಜೂರಾತಿ ಸಿಕ್ಕಿದ್ದು ,200 ಕೋಟಿ ಹಣ ನೀಡಲಾಗಿದ್ದು ಇದೇ ತಂಗಳ 24,25 ರಂದು ಟೆಂಡರ ಪ್ರಕ್ರಿಯೆಗೆ ಸಿ ಎಂ ಬೊಮ್ಮಾಯಿ ಸೂಚನೆ ನೀಡಿದ್ದಾರೆ ಎಂದರು.

ನೇಸರಗಿಯಲ್ಲಿ ಸುಮಾರು 10 ಕೋಟಿ ರೂಪಾಯಿಗಳಲ್ಲಿ ಸುಸಜ್ಜಿತ ಸಮುದಾಯ ಆರೋಗ್ಯ ಕೇಂದ್ರ ನಿರ್ಮಾಣ ಆಗುತ್ತಿದ್ದು ಈ ಯೋಜನೆಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಚಾಲನೆ ನೀಡಲಿದ್ದು ,ಜೆಜೆಎಂ ಕುಡಿಯುವ ನೀರಿನ ಯೋಜನೆ 90% ರಷ್ಟು ಪ್ರಾರಂಭವಾಗಿದ್ದು, 2018 ರಲ್ಲಿ ನೀವು ಕೊಟ್ಟ ಮತಕ್ಕೆ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡಿದ್ದು ಮತ್ತೊಮ್ಮೆ ಆಶೀರ್ವದಿಸಿ ಶಕ್ತಿತುಂಬುವಂತೆ ಮತದಾರರಲ್ಲಿ ಮನವಿ ಮಾಡಿದರು.

ವೇದಿಕೆಯಲ್ಲಿ ಬಿಜೆಪಿ ಸರ್ಕಾರದ ಸಾಧನೆಗಳ ಹಾಗೂ ಶಾಸಕ ಮಹಾಂತೇಶ ದೊಡ್ಡಗೌಡರ ಅವರು ಮಾಡಿದ ಕೆಲಸ ಕಾರ್ಯಗಳ ಬಗ್ಗೆ ಬಸವರಾಜ ಅಂಗಡಿ, ಸಿದ್ದಲಿಂಗ‌ ಬಶೆಟ್ಟಿ,ಹೊಸಮನಿ ಇಂಜಿನಿಯರ್ ಪ್ರಾಸ್ತಾಪಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಿ ಎಪ್ ಕೊಳದೂರ, ಎಸ್ ಎಂ ಪಾಟೀಲ, ಶ್ರೀಶೈಲ ಕಮತಗಿ,ಬಾಗಪ್ಪ ಬಶೆಟ್ಟಿ, ಶಿವಪ್ಪ ಚೋಭಾರಿ, ಈರಣ್ಣ ವಾರದ,ಸಲಿಂ ನಾದಾಪ್,ಸೋಮಶೇಖರ ಮಾಳಣ್ಣವರ, ಬಸವರಾಜ ಪುಟ್ಟಿ,ಆನಂದ ಕಿರಣಿ,ಸತ್ಯವಾನ್ ನಾಯ್ಕ,ಸೋಮಪ್ಪ ಬಶೆಟ್ಟಿ,ಮಲ್ಲೆಶ ಕಿರಣಿ,ಬಸಪ್ಪ ಕುಲಕರ್ಣಿ,ರಾಜು ಯರಡಾಲ, ದಯಾನಂದ ಬಡವಣ್ಣವರ,ನಾಗರಾಜ ತುಬಾಕಿ,ವೀರಭದ್ರ ಚೋಭಾರಿ,ಪಿಡಿಒ ಬಿ ವಾಯ್ ನಾಯ್ಕ,ಎಇಇ ಶ್ರೀನಿವಾಸ ಬಿರಾಧಾರ,ಎಇಇ ಎಚ್ ಎಸ್ ಕಾಕಣಗಿ,ವಣ್ಣೂರ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ,ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

*ಆತ್ಮಹತ್ಯೆಗೆ ಶರಣಾದ ದಂತವೈದ್ಯೆ*

https://pragati.taskdun.com/dental-doctorsuicidebangalore/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button