Kannada NewsKarnataka News

ಸೇತುವೆಯ ರಸ್ತೆಯಲ್ಲಿ ತಗ್ಗು -ಗುಂಡಿ ಬಿದ್ದರೂ ಕಂಡೂ ಕಾಣದಂತೆ ದಾಟುತ್ತಿರುವ ಶಾಸಕ ಪಿ. ರಾಜೀವ್ ; ರಸ್ತೆ ದುರವಸ್ತೆ ಮತ್ತು ದುರಸ್ತಿ ಕುರಿತು ಚಕಾರವೆತ್ತಲಿಲ್ಲ

ಪ್ರಗತಿವಾಹಿನಿ ಸುದ್ದಿ, ಮುಗಳಖೋಡ: ಪಟ್ಟಣದ ಪೂರ್ವ ಭಾಗದಲ್ಲಿ ಹರಿದಿರುವ ಘಟಪ್ರಭಾ ಎಡದಂಡೆ ಕಾಲುವೆಯ ಹತ್ತಿರ ವಿವಿಧ ರಸ್ತೆ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಮಾಡಲು ಆಗಮಿಸಿದ ಶಾಸಕ ಪಿ.ರಾಜೀವ್ ಅವರು ಕಾಲುವೆಗೆ ಅಡ್ಡಲಾಗಿರುವ  ಈ ಮೇಲ್ಸೇತುವೆ  ಮೇಲೆ ಮಳೆಯ ನೀರಿನಿಂದ ತಗ್ಗು – ಗುಂಡಿಗಳು ಬಿದ್ದಿದ್ದು ಅವುಗಳು ಕಂಡೂ ಕಾಣದಂತೆ ರಸ್ತೆಯ ಪಕ್ಕದಲ್ಲಿ ದಾಟಿದರು.
ಮುಗಳಖೋಡ ಪಟ್ಟಣದ ಘಟಪ್ರಭಾ ಎಡದಂಡೆ ಕಾಲುವೆಯ ಸೇತುವೆಯ ರಸ್ತೆಯ ಮೇಲೆ ಗುಂಡಿಗಳ ಮಧ್ಯೆ ಮಳೆ ನೀರಿನಲ್ಲಿ ರಸ್ತೆ  ಹುಡುಕಿಕೊಂಡು ಹೋಗುತ್ತಿರುವ ಶಾಸಕ ಪಿ.ರಾಜೀವ್ ಹಾಗೂ ಪುರಸಭೆಯ ಚುನಾಯಿತ ಜನಪ್ರತಿನಿಧಿಗಳು.

ಈ ಹಿಂದೆ ಕಳೆದ ಜೂನ್ 20 ರಂದು  ಪಾಲಭಾಂವಿ ಗ್ರಾಮಸ್ಥರು ಈ ಮೇಲ್ಸೇತುವೆ ದುರಸ್ತಿ ಗೊಳಿಸಬೇಕು, ಡಾಂಬರೀಕರಣ ಮಾಡಬೇಕೆಂದು  ಆಗ್ರಹಿಸಿ ವಿದ್ಯಾರ್ಥಿಗಳು ಗ್ರಾಮಸ್ಥರು ರಸ್ತೆ ತಡೆದು  ಪ್ರತಿಭಟನೆ ನಡೆಸಿದ್ದರು.

ಈಗ ಶಾಸಕರು ಮತ್ತು ಪುರಸಭೆ ಸದಸ್ಯರು ಬಿನ್ ದಾಸ್ ಅದೇ ಗುಂಡಿಗಳನ್ನು ದಾಟಿ ಹೋಗುತ್ತಿದ್ದಾರೆ. ರಸ್ತೆ ದುರವಸ್ತೆ ಮತ್ತು ದುರಸ್ತಿ ಕುರಿತು ಚಕಾರವೆತ್ತಲಿಲ್ಲ.

ಬೆಳಗಾವಿ ಬಳಿ ವಿದ್ಯುತ್ ಅವಘಡ: ಇಬ್ಬರ ದುರ್ಮರಣ

https://pragati.taskdun.com/latest/electric-mishap-near-belgaum-two-dead/

https://pragati.taskdun.com/latest/poorquality-road-construction-people-angry-athani-belagavi/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button