*ಶಾಸಕ ರಾಜುಕಾಗೆ ವಿರುದ್ಧ ಕಿರುಕುಳ ಆರೋಪ, ಆತ್ಮಹತ್ಯೆ ಬೆದರಿಕೆ; ಗ್ರಾಮ ಪಂಚಾಯತ್ ಸದಸ್ಯ ವಶಕ್ಕೆ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ಜಿಲ್ಲೆ ಕಾಗವಾಡ ಕಾಂಗ್ರೆಸ್ ಶಾಸಕ ರಾಜು ಕಾಗೆ ವಿರುದ್ಧ ಗ್ರಾಮ ಪಂಚಾಯಿತಿ ಸದಸ್ಯರಿಬ್ಬರು ಕಿರುಕುಳ ಆರೋಪ ಮಾಡಿದ್ದು, ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆಯೊಡ್ಡಿದ್ದಾರೆ.
ಶಿರಗುಪ್ಪಿ ಗ್ರಾಮ ಪಂಚಾಯಿತಿ ಸದಸ್ಯ ರಾಮನಗೌಡ ಪಾಟೀಲ್, ರಾಜು ಕಾಗೆ ವಿರುದ್ಧ ಕಿರುಕುಳ ಆರೋಪ ಮಾಡಿದ್ದು, ಕುಟುಂಬ ಸಮೇತವಾಗಿ ಬಂದು ಶಾಸಕರ ಮನೆ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರು.
ನಿನ್ನೆ ರಾತ್ರಿ ಊರಿಗೆ ಮೈಕ್ ಅಳವಡಿಸಿ, ಇಡೀ ಊರಿಗೆ ಕೇಳುವಂತೆ ಮೈಕ್ ಮೂಲಕ ಶಾಸಕರಿಗೆ ಕರೆ ಮಾಡಿ, ಕಿರುಕುಳಕ್ಕೆ ಬೇಸತ್ತು, ಹೆಂಡತಿ, ಮಕ್ಕಳ ಸಮೇತವಾಗಿ ನಿಮ್ಮ ಮನೆ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರು.
ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯ ರಾಮನಗೌಡ ಮನೆಗೆ ಆಗಮಿಸಿದ ಅಥಣಿ ಪೊಲೀಸರು ರಾಮನಗೌಡನನ್ನು ವಶಕ್ಕೆ ಪಡೆದಿದ್ದಾರೆ.
https://pragati.taskdun.com/free-electricitytenantsiddaramaiahclarification/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ