
ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಕೊರೊನಾ ಸೋಂಕಿನ ನಡುವೆ ಬ್ಲ್ಯಾಕ್ ಫಂಗಸ್, ವೈಟ್ ಫಂಗಸ್, ಯೆಲ್ಲೋ ಫಂಗಸ್ ಗಳು ಅಟ್ಟಹಾಸ ಮೆರೆಯುತ್ತಿದ್ದು, ಇದೀಗ ಗ್ರೀನ್ ಫಂಗಸ್ ಎಂಬ ಮತ್ತೊಂದು ಅಪಾಯಕಾರಿ ಫಂಗಸ್ ಭಾರತದಲ್ಲಿ ಪತ್ತೆಯಾಗಿದೆ.
ಕೊರೊನಾದಿಂದ ಗುಣಮುಖನಾಗಿದ್ದ ಮಧ್ಯಪ್ರದೇಶದ ಒಂದೋರ್ ನಲ್ಲಿ 34 ವರ್ಷದ ವ್ಯಕ್ತಿಯಲ್ಲಿ ಗ್ರೀನ್ ಫಂಗಸ್ ಪತ್ತೆಯಾಗಿದೆ. ಇದು ದೇಶದಲ್ಲೇ ಮೊದಲ ಗ್ರೀನ್ ಫಂಗಸ್ ಪ್ರಕರಣವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಸೋಂಕಿತನನ್ನು ಮುಂಬೈಗೆ ಶಿಫ್ಟ್ ಮಾಡಲಾಗಿದೆ ಎಂದು ಅರಬಿಂದೋ ಇನ್ಸ್ ಟಿಟ್ಯೂಟ್ ಆಫ್ ಸೈನ್ಸ್ ನ ಡಾ.ರವಿ ದೋಸಿ ತಿಳಿಸಿದ್ದಾರೆ.
ವ್ಯಕ್ತಿಯ ಶ್ವಾಸಕೋಶ, ರಕ್ತ, ಸೈನಸ್ ನಲ್ಲಿ ಗ್ರೀನ್ ಫಂಗಸ್ ಪತ್ತೆಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಏನೇ ಹೇಳುವುದಿದ್ದರೂ ಕರ್ನಾಟಕದಲ್ಲೆ ಹೇಳುತ್ತೇನೆ