
ಪ್ರಗತಿವಾಹಿನಿ ಸುದ್ದಿ; ದಾವಣಗೆರೆ: ತನ್ನ ಸಹೋದರನ ಮಗ ಚಂದ್ರಶೇಖರ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಶಾಸಕ ಎಂ.ಪಿ.ರೇಣುಕಾಚಾರ್ಯ ಸ್ಫೋಟಕ ಮಾಹಿತಿ ತಿಳಿಸಿದ್ದು, ಇದೊಂದು ಯೋಜಿತ ಕಿಡ್ನ್ಯಾಪ್ ಪ್ರಕರಣ ಎಂದು ಹೇಳಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ರೇಣುಕಾಚಾರ್ಯ, ನನ್ನ ಸಹೋದರ ಎಂ.ಪಿ ರಮೇಶ್ ಮಗ ಚಂದ್ರಶೇಖರ್ ನಾಪತ್ತೆಯಾಗಿ 5 ದಿನಗಳು ಕಳೆದಿವೆ. ಆದರೆ ಈವರೆಗೆ ಸಣ್ಣ ಸುಳಿವೂ ಸಿಕ್ಕಿಲ್ಲ. ಇದೊಂದು ಕಿಡ್ನ್ಯಾಪ್ ಪ್ರಕರಣ ಎಂಬುದು ಖಚಿತವಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಆತನ ಅಪಹರಣಕ್ಕೆ ಪೂರಕವಾದ ಮಾಹಿತಿಗಳು ನಮಗೆ ಬರುತ್ತಿವೆ. ಕುಟುಂಬದಲ್ಲಿ ಆತಂಕ ಹೆಚ್ಚುತ್ತಿದೆ. ಪೊಲೀಸರು ಎಲ್ಲಾ ರೀತಿಯಲ್ಲೂ ಶೋಧ ನಡೆಸುತ್ತಿದ್ದಾರೆ. ಆದರೂ ಯಾವೊಂದು ಸುಳಿವೂ ಸಿಗುತ್ತಿಲ್ಲ. ಚಂದ್ರಶೇಖರ್ ನನ್ನು ಯಾರೋ ಯೋಜಿತವಾಗಿ ಕಿಡ್ನಾಪ್ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ದಾವಣಗೆರೆ ಎಸ್ ಪಿ ಋಷ್ಯಂತ್, ಚಂದ್ರಶೇಖರ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ಶೋಧಕ್ಕಾಗಿ ಪೊಲೀಸರ 4 ತಂಡ ರಚನೆ ಮಾಡಲಾಗಿದೆ. ಮೈಸೂರು, ಶಿವಮೊಗ್ಗ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಹುಡುಕಾಟ ನಡೆಸಲಾಗಿದೆ ಎಂದರು.
ಚಂದ್ರಶೇಖರ್ ಬಹಳ ಸೌಮ್ಯ ಸ್ವಭಾವದ ವ್ಯಕ್ತಿ. ಧ್ಯಾನಕ್ಕಾಗಿ ವಿನಯ್ ಗುರೂಜಿ ಬಳಿ ನಿತ್ಯವೂ ಹೋಗುತ್ತಿದ್ದ ಎಂದು ಆತನ ಸ್ನೇಹಿತ ಕಿರಣ್ ಹೇಳುತ್ತಿದ್ದಾರೆ. ಕಿರಣ್ ಹೇಳಿಕೆಯಲ್ಲಿ ಗೊಂದಲಗಳಿವೆ. ಆತ ಪೊಲೀಸರ ವಶದಲ್ಲಿದ್ದು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಮಾಜಿ ಸಂಸದ ಮುದ್ದ ಹನುಮೇಗೌಡ ಸೇರಿ ಹಲವರು ಬಿಜೆಪಿ ಸೇರ್ಪಡೆ
https://pragati.taskdun.com/latest/ex-mp-muddahanumegowdabjp-joinnalin-kumar-kateel/



