ಪ್ರಗತಿವಾಹಿನಿ ಸುದ್ದಿ; ದಾವಣಗೆರೆ: ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಸಹೋದರನ ಮಗ ಚಂದ್ರಶೇಖರ್ ಅವರ ಶವ ಕೊಳೆತ ಸ್ಥಿತಿಯಲ್ಲಿ ಕಾರಿನಲ್ಲಿ ಪತ್ತೆಯಾಗಿದೆ.
ಶಾಸಕ ರೇಣುಕಾಚಾರ್ಯ ಸಹೋದರನ ಮಗ ಚಂದ್ರಶೇಖರ್ ಅವರ ಬಿಳಿ ಬಣ್ಣದ ಕಾರು ದಾವಣಗೆರೆ ಜಿಲ್ಲೆಯ ಹೊನ್ನಾಳಿ ಬಳಿಯ ಕಡದಕಟ್ಟೆಯ ತುಂಗಾ ಮುಖ್ಯ ಕಾಲುವೆಯಲ್ಲಿ ಪತ್ತೆಯಾಗಿದೆ. ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಕ್ರೇನ್ ಮೂಲಕ ಕಾರನ್ನು ಮೇಲಕೆತ್ತಿದ್ದು, ಕಾರಿನಲ್ಲಿ ಕೊಳೆತ ಸ್ಥಿತಿಯಲ್ಲಿ ಚಂದ್ರಶೇಖರ್ ಮೃತದೇಹ ಪತ್ತೆಯಾಗಿದೆ.
ಶಿವಮೊಗ್ಗದ ಗೌರಿಗದ್ದೆಯ ವಿನಯ್ ಗುರೂಜಿ ಅವರನ್ನು ಭೇಟಿಯಾಗಿ ಬರುವುದಾಗಿ ತೆರಳಿದ್ದ ಚಂದ್ರಶೇಖರ್, ಶಿವಮೊಗ್ಗದಿಂದ ವಾಪಸ್ ಆಗಿದ್ದರೂ ಹೊನ್ನಾಳಿ ನಿವಾಸಕ್ಕೆ ಬಂದು ತಲುಪಿರಲಿಲ್ಲ. ಅ.30ರ ರಾತ್ರಿಯಿಂದ ಚಂದ್ರಶೇಖರ್ ನಾಪತ್ತೆಯಾಗಿದ್ದರು. ಚಂದ್ರಶೇಖರ್ ಪತ್ತೆಗಾಗಿ ದಾವಣಗೆರೆ ಎಸ್ ಪಿ ರಿಷ್ಯಂತ್ ನೇತೃತದಲ್ಲಿ ಪೊಲೀಸರು 4 ತಂಡ ರಚಿಸಿ ಹುಡುಕಾಟ ನಡೆಸಿದ್ದರು. ಆದರೆ ಈಗ ಚಂದ್ರಶೇಖರ್ ಕಾರು ತುಂಗಾ ನದಿಯಲ್ಲಿ ಬಿದ್ದಿದ್ದು, ಅವರ ಶವ ಕಾರಿನಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಓರ್ವ ವಶಕ್ಕೆ:
ಶಾಸಕ ರೇಣುಕಾಚಾರ್ಯ ಸಹೋದರನ ಮಗ ಚಂದ್ರಶೇಖರ್, ಚಿಕ್ಕಮಗಳೂರಿನ ಗೌರಿಗದ್ದೆಯ ವಿನಯ್ ಗುರೂಜಿ ಆಶ್ರಮಕ್ಕೆ ಹೋಗಿ ಬರುವುದಾಗಿ ಹೇಳಿ ಹೊರಟಿದ್ದರು. ವಿನಯ್ ಗುರೂಜಿ ಅವರನ್ನು ಭೇಟಿಯಾಗಿ ಆಶ್ರಮದಲ್ಲಿ ಪೂಜೆ ಮುಗಿದ ಬಳಿಕ ಭಕ್ತರಿಗೆ ಊಟವನ್ನು ಬಡಿಸಿದ್ದಾರೆ. ಈ ವೇಳೆ ಚಂದ್ರಶೇಖರ್ ಸ್ನೇಹಿತ ಕಿರಣ್ ಅವರ ಜೊತೆಯಲ್ಲಿದ್ದ. ಇಬ್ಬರೂ ಒಟ್ಟಿಗೆ ಗೌರಿಗದ್ದೆಯಿಂದ ವಾಪಸ್ ಆಗಿದ್ದಾರೆ. ಆದರೆ ಕಿರಣ್ ಶಿವಮೊಗ್ಗದಲ್ಲಿ ಇಳಿದುಕೊಂಡಿದ್ದ ಎನ್ನಲಾಗಿದೆ. ಅ.30ರಿಂದ ಚಂದ್ರಶೇಖರ್ ನಾಪತ್ತೆಯಾಗಿದ್ದರು. ಇದೀಗ ಚಂದ್ರಶೇಖರ್ ಸಾವಿನ ಪ್ರಕರಣದ ಹೆಚ್ಚಿನ ತನಿಖೆಗಾಗಿ ದಾವಣಗೆರೆ ಪೊಲೀಸರು ಕಿರಣ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಹಲವು ಅನುಮಾನ:
ಚಂದ್ರಶೇಖರ್ ಸಾವು ಪ್ರಕರಣ ಹಲವು ಅನುಮಾನಕ್ಕೂ ಕಾರಣವಾಗಿದೆ. ದಾವಣಗೆರೆ ಬಳಿಯ ನ್ಯಾಮತಿ ಬಳಿ ದ್ವಿಪಥ ಹೆದ್ದಾರಿಯಲ್ಲಿ ಅ.30ರಂದು ರಾತ್ರಿ ಚಂದ್ರಶೇಖರ್ ಕಾರಿನಲ್ಲಿ ಇಬ್ಬರು ಇದ್ದರು. ಈ ಬಗ್ಗೆ ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ ಎನ್ನಲಾಗಿದೆ. ಆದರೆ ಈಗ ಚಂದ್ರಶೇಖರ್ ಕಾರಿನ ಸಮೇತ ಶವವಾಗಿ ತುಂಗಾ ಕಾಲುವೆಯಲ್ಲಿ ಪತ್ತೆಯಾಗಿದ್ದಾರೆ. ಕಾರಿನ ಹಿಂದಿನ ಸೀಟ್ ನಲ್ಲಿ ಚಂದ್ರಶೇಖರ್ ಮೃತದೇಹವಿತ್ತು ಎನ್ನಲಾಗಿದೆ. ಹಾಗಾದರೆ ಕಾರಿನಲ್ಲಿ ಮತ್ತೊಬ್ಬ ವ್ಯಕ್ತಿ ಇದ್ದರೆ? ಅವರ ಸ್ಥಿತಿ ಏನಾಯಿತು? ಚಂದ್ರಶೇರ್ ಅವರದ್ದು ಕೊಲೆಯೋ ಅಥವಾ ಅಪಘಾತದ ಸಾವೋ ಎಂಬ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಒಟ್ಟಾರೆ ಪ್ರಕರಣದ ಬಗ್ಗೆ ಹಲವು ಶಂಕೆ ವ್ಯಕ್ತವಾಗಿದ್ದು, ಸತ್ಯಾಸತ್ಯತೆ ತನಿಖೆಯಿಂದ ತಿಳಿದುಬರಬೇಕಿದೆ.
ಶಾಸಕ ರೇಣುಕಾಚಾರ್ಯ ಸಹೋದರನ ಮಗ ನಾಪತ್ತೆ ಪ್ರಕರಣ: ತುಂಗಾ ಕಾಲುವೆಯಲ್ಲಿ ಕಾರು ಪತ್ತೆ
https://pragati.taskdun.com/latest/mla-renukacharyabrother-sun-missing-casetunga-kalvecar-found/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ