Latest

ಸಾಹುಕಾರ್ ವಿರುದ್ಧ ಸಿಡಿದೆದ್ದ ಬಿಜೆಪಿ ಶಾಸಕರು

ತಮ್ಮ ಸ್ಥಾನ ತ್ಯಾಗ ಮಾಡಿ ಸೋತವರಿಗೆ ಕೊಡಲಿ

ಪ್ರಗತಿವಾಹಿನಿ ಸುದ್ದಿ; ದಾವಣಗೆರೆ: ಸಚಿವ ಸ್ಥಾನಕ್ಕಾಗಿ ಮೂಲ ಹಾಗೂ ವಲಸಿಗ ಬಿಜೆಪಿಗರ ನಡುವೆಯೇ ಜಟಾಪಟಿ ಆರಂಭವಾಗಿದ್ದು, ಸೋತವರಿಗೆ ಮಂತ್ರಿ ಸ್ಥಾನ ಕೊಡಿಸಲು ಯತ್ನಿಸಿರುವ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಮೂಲ ಬಿಜೆಪಿ ಶಾಸಕರು ತಿರುಗಿಬಿದ್ದಿದ್ದಾರೆ.

ದಾವಣಗೆರೆಯಲ್ಲಿ ಮಾತನಾಡಿರುವ ಶಾಸಕ ಎಂ.ಪಿ.ರೇಣುಕಾಚಾರ್ಯ, ಚುನಾವಣೆಯಲ್ಲಿ ಗೆದ್ದವರಿಗೆ, ಬಿಜೆಪಿ ಸರ್ಕಾರ ರಚನೆಗೆ ಕಾರಣರಾದವರಿಗೆ ಸಚಿವ ಸ್ಥಾನ ಕೊಡಲಿ. ಆದರೆ ಪದೇ ಪದೇ ಸೋತವರ ಪರ ಮಾತನಾಡುತ್ತಾ, ಅವರಿಗೆ ಸಚಿವ ಸ್ಥಾನ ಕೊಡಬೇಕು ಎನುವುದಾದರೆ ಇವರ ಮಂತ್ರಿ ಸ್ಥಾನ ತ್ಯಾಗ ಮಾಡಿ ಸೋತವರಿಗೆ ಬಿಟ್ಟುಕೊಡಲಿ ಎಂದು ಸಚಿವ ರಮೇಶ್ ಜಾರಕಿಹೊಳಿಗೆ ಸವಾಲು ಹಾಕಿದ್ದಾರೆ.

ರಾಜ್ಯ ಬಿಜೆಪಿಯಲ್ಲಿನ ಬೆಳವಣಿಗೆಗಳ ಬಗ್ಗೆ ನಮ್ಮ ಅಭಿಪ್ರಾಯ ತಿಳಿಸಲು ಮುಂದಿನ ವಾರ ಶಾಸಕರೆಲ್ಲ ವರಿಷ್ಠರ ಭೇಟಿ ಮಾಡುತ್ತೇವೆ ಎಂದಿರುವ ರೇಣುಕಾಚಾರ್ಯ, ಮಿತ್ರ ಮಂಡಳಿ ಹಾಗೂ ನಮ್ಮ ನಡುವೆ ಯಾವುದೇ ಜಗಳವಿಲ್ಲ ಅಥವಾ ನಾವು ಗುಂಪುಗಾರಿಕೆಯನ್ನೂ ಮಾಡುತ್ತಿಲ್ಲ. ಆದರೆ ನಮ್ಮ ಅಭಿಪ್ರಾಯವನ್ನು ತಿಳಿಸುತ್ತೇವೆ ಎಂದಿದ್ದಾರೆ.

Home add -Advt

Related Articles

Back to top button