Belagavi NewsBelgaum NewsKannada NewsKarnataka NewsNationalPolitics

*ಮಾಣಕಾಪುರ ಗ್ರಾಮದ ಕಾಳಜಿ ಕೇಂದ್ರಕ್ಕೆ ಶಾಸಕಿ ಶಶಿಕಲಾ ಜೊಲ್ಲೆ ಭೇಟಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬುಧವಾರ ನಿಪ್ಪಾಣಿ ಕ್ಷೇತ್ರದ ಮಾಣಕಾಪುರ, ಮಾಂಗುರ ಬಾರವಾಡ, ಶಿರದವಾಡ ಭೇಟಿ ನೀಡಿ ಪ್ರವಾಹ ಪರಿಸ್ಥಿತಿಯನ್ನು ಶಾಸಕಿ ಶಶಿಕಲಾ ಜೊಲ್ಲೆ ಅವರು ವೀಕ್ಷಿಸಿದರು.

ಹಲವಾರು ದಿನಗಳಿಂದ ಸುರಿಯುತ್ತಿರುವ ಮಳೆಯ ಹಿನ್ನೆಲೆ, ನಿಪ್ಪಾಣಿ ಕ್ಷೇತ್ರದ ಮಾಣಕಾಪುರಗ್ರಾಮಕ್ಕೆ ಮಾಜಿ ಸಚಿವರು ಹಾಗೂ ನಿಪ್ಪಾಣಿ ಮತಕ್ಷೇತ್ರದ ಶಾಸಕರಾದ  ಶಶಿಕಲಾ ಜೊಲ್ಲೆಯವರು ಭೇಟಿ ನೀಡಿ, ಪ್ರವಾಹ ಪರಿಸ್ಥಿತಿಯನ್ನು ವೀಕ್ಷಿಸಿ, ಕೆಲವೊಂದು ಮನೆಗಳಿಗೆ ನೀರು ನುಗ್ಗಿದ್ದು, ಬೆಳೆಹಾನಿ ಮತ್ತು ಮನೆಹಾನಿ ಕುರಿತು ಬಗ್ಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. 

ಇದೇ ವೇಳೆ ಮಾಣಕಾಪುರ ಗ್ರಾಮದಲ್ಲಿ ನೆರೆ ಸಂತ್ರಸ್ತರಿಗಾಗಿ ಪ್ರಾರಂಭಿಸಲಾದ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ,ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿ, ಮನೆ ಕಳೆದುಕೊಂಡು, ಬೆಳೆದ ಬೆಳೆ ನೀರಲ್ಲಿದ್ದು, ಸಂತ್ರಸ್ತರು ಕಾಳಜಿ ಕೇಂದ್ರದಲ್ಲಿದ್ದರೂ ಸರ್ಕಾರ ಕಡೆಯಿಂದ ಸಂತ್ರಸ್ತರಿಗೆ ಊಟದ ಹಾಗೂ ಬ್ಲಾಂಕೆಟ್ ವ್ಯವಸ್ಥೆ ಮಾಡಿರಲಿಲ್ಲ. ಈ ವಿಚಾರ ನನ್ನ ಗಮನಕ್ಕೆ ಬಂದ ಹಿನ್ನಲೆಯಲ್ಲಿ ಅವರಿಗೆ ಈ ಕೂಡಲೇ  ಊಟದ ವ್ಯವಸ್ಥೆ ಮಾಡುವಂತೆ ತಹಶೀಲ್ದಾರ, ಪಿ.ಡಿ.ಓ. ಹಾಗೂ ಗ್ರಾಮ ಲೆಕ್ಕಾಧಿಕಾರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ತಹಶೀಲ್ದಾರರಾದ ಮುಜಾಫರ್ ಬಳಿಗಾರ, ನೋಡಲ್ ಅಧಿಕಾರಿಯಾದ ಎ.ಎಸ್.ಪೂಜಾರಿ, ಪಿ.ಡಿ.ಓ ನಂದಕುಮಾರ ಪಪ್ಪೆ, ಗ್ರಾಮಲೆಕ್ಕಾಧಿಕಾರಿ ಎಂ.ಎ.ಸನದಿ, ಅಧಿಕಾರಿಗಳು ಸ್ಥಳೀಯ ಮುಖಂಡರು, ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button