Latest

50 ಸಾವಿರ ರೂ ನೆರವು ನೀಡಿದ ಶಾಸಕ ಜಮೀರ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಕ್ಕಳ ಆನ್​ಲೈನ್​ ಶಿಕ್ಷಣಕ್ಕಾಗಿ ತಾಳಿ ಅಡವಿಟ್ಟು ಟಿವಿ ತಂದಿದ್ದ ಗದಗದ ಮಹಿಳೆಗೆ ಶಾಸಕ ಜಮೀರ್ ಅಹ್ನದ್ 50 ಸಾವಿರ ರೂಪಾಯಿ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಗದಗ ಜಿಲ್ಲೆಯ ನರಗುಂದ ತಾಲೂಕಿನ ರಡ್ಡೇರ್ ನಾಗನೂರ ಗ್ರಾಮದಲ್ಲಿ ಈ ಘಟನೆ ನಡೆದಿತ್ತು. ಕಸ್ತೂರಿ ಅನ್ನೋ ಮಹಿಳೆ ಇಬ್ಬರು ಮಕ್ಕಳು ಹೈಸ್ಕೂಲ್ ಮತ್ತು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾರೆ. ಓರ್ವ ವಿದ್ಯಾರ್ಥಿನಿ ಎಂಟನೇ ತರಗತಿಯಲ್ಲಿ, ಇನ್ನೋರ್ವ ಏಳನೇ ತರಗತಿಯಲ್ಲಿ ಓದುತ್ತಿದ್ದಾರೆ. ಮಕ್ಕಳಿಗೆ ಚಂದನ ವಾಹಿನಿಯಲ್ಲಿ ಪ್ರಸಾರವಾಗುವ ಪಾಠವನ್ನ ಕೇಳಲು ಪ್ರತಿದಿನ ಟಿವಿ ನೋಡುವಂತೆ ಶಿಕ್ಷಕರು ಹೇಳಿದ್ದರು. ಜೊತೆಗೆ ಅದರಲ್ಲಿ ಬರುವ ಪಾಠಗಳ ಬಗ್ಗೆ ಕರೆ ಮಾಡಿ ಪ್ರಶ್ನೆಗಳನ್ನು ಕೇಳುತ್ತಿದ್ದರು.

ಮನೆಯಲ್ಲಿ ಟಿವಿ ಇಲ್ಲದ ಕಾರಣ ಪಾಠ ಕೇಳುವುದಕ್ಕೆ ಆಗುತ್ತಿರಲಿಲ್ಲ. ಜೊತೆಗೆ ಶಿಕ್ಷಕರು ಕೇಳಿದ ಪ್ರಶ್ನೆಗೆ ಉತ್ತರಿಸಲು ಮಕ್ಕಳಿಗೆ ಸಾಧ್ಯವಾಗುತ್ತಿರಲಿಲ್ಲ. ಇವರ ಮನೆಯಲ್ಲಿ ಈ ಮೊದಲು ಇದ್ದ ಟಿವಿ ಸುಟ್ಟು ಹೋಗಿತ್ತು. ಹೀಗಾಗಿ ಮಕ್ಕಳು ಟಿವಿ ನೋಡಲು ಕಷ್ಟ ಪಡುತ್ತಿದ್ದರು. ಹೀಗಾಗಿ ತಾಯಿ ತನ್ನ ತಾಳಿ ಅಡವಿಟ್ಟು ಟಿವಿ ಕೊಡಿಸಿದ್ದರು.

ಮಹಿಳೆಯ ಸಂಕಷ್ಟಕ್ಕೆ ಹಲವರು ನೆರವು ನೀಡುತ್ತಿದ್ದು, ಇದೀಗ ಶಾಸಕ ಜಮೀರ್​ ಅಹ್ಮದ್​, ಆನ್​ಲೈನ್​ ಶಿಕ್ಷಣ ನೀಡುವ ಉದ್ದೇಶದಿಂದ ಗದಗದಲ್ಲಿ ಮಹಿಳೆಯೊಬ್ಬರು ತಾಳಿ ಅಡವಿಟ್ಟು ಮಕ್ಕಳಿಗೆ ಟಿವಿ ತಂದುಕೊಟ್ಟ ವಿಚಾರ ನನಗೆ ನೋವು ತಂದಿದೆ. ಸ್ನೇಹಿತನ ಮೂಲಕ ಐವತ್ತು ಸಾವಿರ ರೂಪಾಯಿ ಹಣವನ್ನು ಅವರ ಮನೆಗೆ ತಲುಪಿಸಿದ್ದೇನೆ ಎಂದಿದ್ದಾರೆ.

ಮಹಿಳೆ ಅಡವಿಟ್ಟ ಮಾಂಗಲ್ಯ ಬಿಡಿಸಿಕೊಡುವುದಾಗಿ ಸಚಿವರ ಭರವಸೆ

ಆನ್ ಲೈನ್ ಶಿಕ್ಷಣ: ಮಕ್ಕಳಿಗಾಗಿ ಟಿವಿ ಖರೀದಿಗೆ ಮಾಂಗಲ್ಯ ಅಡವಿಟ್ಟ ತಾಯಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button