Latest

ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾದ ಖ್ಯಾತ ನಟಿ ಮೃತದೇಹ

ಪ್ರಗತಿವಾಹಿನಿ ಸುದ್ದಿ; ಕೋಝಿಕೋಡ್: ಕನ್ನಡದ ಲಾಕ್ ಡೌನ್ ಚಿತ್ರದಲ್ಲಿ ನಟಿಸಿದ್ದ ಮಲಯಾಳಂ ನ ಖ್ಯಾತ ನಟಿ ಶಹನಾ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಕಾಸರಗೋಡು ಮೂಲದ ಶಹನಾ (20) ರೂಪದರ್ಶಿ ಹಾಗೂ ನಟಿಯಾಗಿದ್ದು, ಕಳೆದ ಒಂದುವರೆ ವರ್ಷದ ಹಿಂದಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

ಇದೀಗ ಕೇರಳದ ಕೋಝಿಕೋಡ್ ನ ನಿವಾಸದಲ್ಲಿ ಶಹನಾ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ತಮ್ಮ ಮಗಳ ಸಾವಿಗೆ ಆಕೆಯ ಪತಿ ಸಾಜನ್ ಕಾರಣ. ಪತಿ ಮಗಳಿಗೆ ಚಿತ್ರಹಿಂಸೆ ನೀಡುತ್ತಿದ್ದ ಎಂದು ಶಹನಾ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ.

ದಾಂಪತ್ಯ ಕಲಹದಿಂದ ಬೇಸತ್ತು ಶಹನಾ ಆತ್ಮಹತ್ಯೆಗೆ ಶರಣಾಗಿದ್ದಾರಾ ಅಥವಾ ಕೊಲೆಯೋ ಎಂಬುದು ತನಿಖೆಯಿಂದಷ್ಟೇ ತಿಳಿಯಬೇಕಿದೆ. ನಟಿ ಶಹನಾ ಸಾವು ಹಿನ್ನೆಲೆಯಲ್ಲಿ ಆಕೆಯ ಪತಿ ಸಾಜನ್ ನನ್ನು ಪೊಲೀಸರು ಬಂಧಿಸಿದ್ದಾರೆ. ಶಹನಾ ಕನ್ನಡದ ಲಾಕ್ ಡೌನ್ ಚಿತ್ರದಲ್ಲಿ ನಟಿಸಿದ್ದರು.
ಕಾರ್ಯಕ್ರಮ ಉದ್ಘಾಟನೆ ವೇಳೆ ಮುರಿದು ಬಿದ್ದ ಲೈಟಿಂಗ್ ಟ್ರೆಸ್; ಸಂಸದ ಈರಣ್ಣ ಕಡಾಡಿ ಸ್ವಲ್ಪದರಲ್ಲಿ ಪಾರು

Home add -Advt

Related Articles

Back to top button