LatestUncategorized

*ಮೊಬೈಲ್ ಚಾರ್ಜ್ ಮಾಡುವಾಗ ಕರೆಂಟ್ ಶಾಕ್; ವಿದ್ಯಾರ್ಥಿ ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ಮೊಬೈಲ್ ಫೋನ್ ಚಾರ್ಜ್ ಮಾಡುವಾಗ ಕರೆಂಟ್ ಶಾಕ್ ಹೊಡೆದು ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಮಂಜುನಾಥ ನಗರದ ವರ್ಷಿಣಿ ಜೆಂಟ್ಸ್ ಪಿಜಿಯಲ್ಲಿ ಈ ದುರಂತ ಸಂಭವಿಸಿದೆ. ಬೀದರ್ ಮೂಲದ ಶ್ರೀನಿವಾಸ್ (24) ಮೃತ ವಿದ್ಯಾರ್ಥಿ.

ಸಾಫ್ಟ್ ವೇರ್ ಕೋರ್ಸ್ ಗಾಗಿ ಬೆಂಗಳೂರಿಗೆ ಬಂದು ಪಿಜಿಯಲ್ಲಿ ವಾಸವಾಗಿದ್ದ. ರೂಮ್ ನಲ್ಲಿ ಮೊಬೈಲ್ ಚಾರ್ಜ್ ಹಾಕಲು ಹೋಗಿದ್ದಾಗ ಸ್ವಿಚ್ ಬೋರ್ಡ್ ನಿಂದ ವಿದ್ಯುತ್ ಪ್ರವಹಿಸಿ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ.

Home add -Advt

ಶ್ರೀನಿವಾಸ್ ರೂಮ್ ಮೇಟ್, ಆತನನ್ನು ಕರೆಯಲೆಂದು ರೂಮಿಗೆ ಹೋಗಿದ್ದಾಗ ವಿದ್ಯಾರ್ಥಿ ಅಂಗಾತ ಕೆಳಗೆ ಬಿದ್ದಿದ್ದ. ಏನಾಯಿತು ಎಂದು ಆತನ ಮೈಮುಟ್ಟುತ್ತಿದ್ದಂತೆ ರೂಮ್ ಮೇಟ್ ಗೂ ಕರೆಂಟ್ ಶಾಕ್ ಹೊಡೆದಿದೆ. ಸದ್ಯ ರೂಮ್ ಮೇಟ್ ಬಚಾವಾಗಿದ್ದಾನೆ.

ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Related Articles

Back to top button