ಪ್ರಗತಿವಾಹಿನಿ ಸುದ್ದಿ : ದೆಹಲಿಯಿಂದ ಬೆಂಗಳೂರಿಗೆ ಸಾವಿರಾರು ಮೊಬೈಲ್ ಗಳನ್ನು ಸಾಗಿಸಲಾಗುತ್ತಿದ್ದ ಕಂಟೈನರ್ ಕಳ್ಳತನವಾಗಿದ್ದು, ಶಿಯೋಮಿ ಕಂಪನಿಗೆ ಸೇರಿದ 3 ಕೋಟಿ ಮೌಲ್ಯದ ಮೊಬೈಲ್ ಕಳುವಾಗಿದೆ.
ದೆಹಲಿಯಿಂದ ಬೆಂಗಳೂರಿಗೆ ಹೊರಟಿದ್ದ ಕಂಟೈನರ್ ಬೆಂಗಳೂರಿಗೆ ತಲುಪಿಲ್ಲ. ಕಳೆದ ನ. 22ರಂದು ಈ ಘಟನೆ ನಡೆದಿದೆ. ಕಂಟೈನರ್ ಸರಿಯಾದ ಸಮಯಕ್ಕೆ ಬೆಂಗಳೂರು ತಲುಪದ ಕಾರಣ ಅನುಮಾನಗೊಂಡ ಕಂಪನಿಯವರು ಗಾಡಿಯ ಜಿಪಿಎಸ್ ಪರಿಶೀಲಿಯಾದಾಗ ಚಿಕ್ಕಬಳ್ಳಾಪುರ ತಾಲೂಕಿನ ರೆಡ್ಡಿಗೊಲ್ಲರಹಳ್ಳಿ ಬಳಿ ಕಂಟೈನರ್ ನಿಂತಿದ್ದು ಗೊತ್ತಾಗಿದೆ.
ಹೀಗಾಗಿ ಗಾಡಿಯ ಲೊಕೇಶನ್ ಮಾಹಿತಿಯನ್ನು ಪೆರೇಸಂದ್ರೆ ಠಾಣೆ ಪೊಲೀಸರಿಗೆ ಕಂಪನಿಯವರು ನೀಡಿದ್ದು, ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಖಾಲಿ ಕಂಟೈನರ್ ನಿಂತಿರುವುದು ಗೊತ್ತಾಗಿದೆ. ಆದ್ರೆ ಕಂಟೈನರ್ ಚಾಲಕ ನಾಪತ್ತೆಯಾಗಿದ್ದಾನೆ.
ಈ ಕಂಟೈನರ್ ನ ಚಾಲಕ ರಾಹುಲ್ ಎಂಬಾತ ಎಂದು ತಿಳಿದುಬಂದಿದ್ದು, ಕೋಟ್ಯಂತರ ರೂಪಾಯಿಗಳ ಮೊಬೈಲ್ ಕದ್ದು ಖಾಲಿ ಕಂಟೈನರ್ ಸ್ಥಳದಲ್ಲಿ ಬಿಟ್ಟು ಪರಾರಿಯಾಗಿದ್ದಾನೆ. ಸದ್ಯ ಈತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ