
ಸಂಚಾರಿ ಪಶು ಚಿಕತ್ಸಾ ಘಟಕ ಹಾಗೂ ಇಲಾಖೆಯ ವಿವಿಧ ಕಟ್ಟಡಗಳ ಉದ್ಘಾಟನೆ:
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :- ಪಶು ಪಾಲನಾ ಮತ್ತು ವೈದ್ಯಕೀಯ ಸೇವಾ ಇಲಾಖೆ ರಾಷ್ಟ್ರೀಯ ಜಾನವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಸಂಚಾರಿ ಪಶು ಚಿಕತ್ಸಾ ಘಟಕಗಳ ಲೋಕರ್ಪಣೆ ಹಾಗೂ ಇಲಾಖೆಯ ವಿವಿಧ ಕಟ್ಟಡಗಳ ಕಾರ್ಯಕ್ರಮ ಜುಲೈ ೧೯ ರಂದು ಬೆಳಿಗ್ಗೆ ೧೧ ಘಂಟೆಗೆ ಸುವರ್ಣ ವಿಧಾನಸೌಧದ ಸಂಟ್ರಲ್ ಹಾಲ್‌ನಲ್ಲಿ ನಡೆಯಲಿದೆ.
. ಜಿಲ್ಲಾ ಉಸ್ತಾವರಿ ಜಲಪಂನ್ಮೂಲ ಸಚಿವರಾದ ಗೋವಿಂದ ಕಾರಜೋಳ ಕಾರ್ಯಕ್ರಮ ಉದ್ಘಾಟಿಸುವರು. ಅರಣ್ಯ ಹಾಗೂ ಆಹಾರ-ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರು, ಹಾಗೂ ಮುಜರಾಯಿ, ಹಜ್ ಹಾಗೂ ವಕ್ಫ ಸಚಿವರ ಶಶಿಕಲಾ ಜೊಲ್ಲೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿಲಿದ್ದಾರೆ .
ಈ ಕಾರ್ಯಕ್ರಮದ ಸಂಚಾರಿ ಪಶು ಚಿಕಿತ್ಸಾ ಘಟಕಗಳ ಲೋಕಾರ್ಪಣೆಯನ್ನು ಪಶು ಸಂಗೋಪನಾ ಸಚಿವರು ಪ್ರಭು ಬಿ.ಚವ್ಹಾಣ ಮಾಡಲಿದ್ದಾರೆ.
.ಬೆಳಗಾವಿ ಗ್ರಾಮೀಣ ಶಾಸಕರಾದ ಲಕ್ಷ್ಮೀ ಆರ್ ಹೆಬ್ಬಾಳಕರ ಅಧ್ಯಕ್ಷತೆ ವಹಿಸಿಲಿದ್ದಾರೆ. ಜಿಲ್ಲೆಯ ಎಲ್ಲಾ ಪ್ರತಿನಿಧಿಗಳು ಭಾಗವಹಿಸಿಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಪ್ರಾದೇಶಿಕ ಆಯುಕ್ತರಾದ ಆಮ್ಲಾನ್ ಆದಿತ್ಯ ಬಿಸ್ವಾಸ, ಜಿಲ್ಲಾಧಿಕಾರಿಗಳಾದ ನಿತೇಶ ಪಾಟೀಲ, ಪೋಲಿಸ್ ಆಯುಕ್ತರಾದ ಎಂ.ಬಿ.ಬೋರಲಿಂಗಯ್ಯ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ದರ್ಶನ ಎಚ್.ವಿ ಭಾವಹಿಸಲಿದ್ದಾರೆ. ಎಂದು ಧಾರವಾಡ ಜಿಂಟಿ ನಿರ್ದೇಶಕರು ಪಶು ಪಾಲನಾ ಮತ್ತು ಬೆಳಗಾವಿ ಪಶು ವೈದ್ಯಕೀಯ ಸೇವಾ ಇಲಾಖೆ ಬಿ.ಎಲ್.ಪರಮೇಶ್ವರ ನಾಯ್ಕ ಮತ್ತು ಉಪನಿರ್ದೇಶಕ ಪಶು ಪಾಲನಾ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕರ ಮನೆ ಬಾಗಿಲಿಗೆ “ಸಂಚಾರಿ ಪಶು ಚಿಕಿತ್ಸಾ ಘಟಕ”
೨೦೨೧-೨೨ ನೇ ಸಾಲಿನಲ್ಲಿ ಜಾನುವಾರು ಆರೋಗ್ಯ ಮತ್ತು ರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ Establishment & Strengthening of Veterinary Hospitals and Dispensaries (ESVHD) ಘಟಕದಲ್ಲಿ, ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಒಂದು ಲಕ್ಷ ಜಾನುವಾರುಗಳಿಗೆ ಒಂದು ಮೊಬೈಲ್ ವೆಟರಿನರಿ ಘಟಕ ಸ್ಥಾಪಿಸಲಾಗಿರುತ್ತದೆ.
೨೦ನೇ ಜಾನುವಾರು ಗಣತಿಯ ಪ್ರಕಾರ ರಾಜ್ಯದಲ್ಲಿ ಒಟ್ಟು ೨೯೦ ಲಕ್ಷ (ದನ, ಎಮ್ಮೆ , ಕರು, ಮೇಕೆ ಮತ್ತು ಹಂದಿ ) ಜಾನುವಾರುಗಳಿದ್ದು, ಒಟ್ಟು ೨೯೦ Customized ಸಂಚಾರಿ ಪಶು ಚಿಕಿತ್ಸಾ ವಾಹನಗಳನ್ನು (ಪಶುಸಂಜೀವಿನಿ ಯೋಜನೆಯಡಿ ೧೫+ ಇsvhಜ ಅಡಿ ೨೭೫) ಜೆಮ್ ಪೋರ್ಟಲ್‌ನಲ್ಲಿ ಒಟ್ಟು ರೂ ೪೪ ಕೋಟಿಗಳ ಕೇಂದ್ರದ ಅನುದಾನದಲ್ಲಿ ಖರೀದಿಸಲಾಗಿದೆ.
ಜಾನುವಾರುಗಳಲ್ಲಿ ಕಂಡು ಬರುವ ರೋಗಗಳ (ದನ ಎಮ್ಮೆ ಹಂದಿ, ಕುರಿ ಮತ್ತು ಮೇಕೆ ಮಾತ್ರ) ರೋಗನಿರ್ಣಯ, ಅಗತ್ಯ ತುರ್ತು ಚಿಕಿತ್ಸೆ ಮತ್ತು ಸಣ್ಣ ಶಸ್ತ್ರಚಿಕಿತ್ಸೆ ಆಡಿಯೋ ದೃಶ್ಯ ಸಾಧನಗಳು ಮತ್ತು ಜಾನುವಾರುಗಳ ಚಿಕಿತ್ಸೆಗಾಗಿ ಇತರ ಮೂಲಭೂತ ಅವಶ್ಯಕತೆಗಳಿಗಾಗಿ ಉಪಕರಣಗಳೊಂದಿಗೆ ಪಶುವೈದ್ಯಕೀಯ ಆರೋಗ್ಯ ರಕ್ಷಣೆಗಾಗಿ ಈ Customized ಸಂಚಾರಿ ಪಶು ಚಿಕಿತ್ಸಾ ವಾಹನಗಳನ್ನು ಬಳಸಬಹುದಾಗಿದೆ.
ಇSಗಿಊಆ ಅಡಿ ಖರೀದಿಸಲಾಗಿರುವ ೨೭೫ ಸಂಚಾರಿ ಪಶು ಚಿಕಿತ್ಸಾ ವಾಹನಗಳಲ್ಲಿ ಬೆಂಗಳೂರು ವಿಭಾಗ- ೭೫, ಮೈಸೂರು ವಿಭಾಗ -೬೮ , ಬೆಳಗಾವಿ ವಿಭಾಗ -೮೨ ಮತ್ತು ಕಲಬುರ್ಗಿ ವಿಭಾಗಕ್ಕೆ -೬೨ ವಾಹನಗಳನ್ನು ಈಗಾಗಲೇ ಹಂಚಿಕ ಮಾಡಲಾಗಿದೆ.
ಬೆಳಗಾವಿ ವಿಭಾಗದ ಬೆಳಗಾವಿ ತಾಲ್ಲೂಕಿಗೆ -೧೭ , ಬಾಗಲಕೋಟೆ -೧೩, ಧಾರವಾಡ -೮, ಗದಗ -೮, ಹಾವೇರಿ -೯, ಉತ್ತರ ಕನ್ನಡ -೧೩ ಮತ್ತು ವಿಜಯಪುರ -೧೪ ಹೀಗೆ ಒಟ್ಟು ೮೨ ವಾಹನಗಳನ್ನು ಸರಬರಾಜು ಮಾಡಲಾಗಿದೆ.
ಸಂಚಾರಿ ಪಶು ಚಿಕಿತ್ಸಾ ವಾಹನಗಳ ಮೂಲಕ ರೈತರ ಮನೆ ಬಾಗಿಲಿಗೆ ಅಗತ್ಯ ತುರ್ತು ಪಶುವೈದ್ಯಕೀಯ ಸೇವೆಗಳನ್ನು ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಪ್ರತಿ ವಾಹನಕ್ಕೆ ಒಬ್ಬ ಪಶುವೈದ್ಯರು, ಒಬ್ಬ ಅರೆ ತಾಂತ್ರಿಕ ಸಿಬ್ಬಂದಿ ಮತ್ತು ವಾಹನಚಾಲಕ ಕಮ್ ಗ್ರೂಪ್’ ಡಿ ಗಳು ನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲಾಗಿದೆ.
ಸದರಿ ಸಂಚಾರಿ ಪಶು ಚಿಕಿತ್ಸಾ ವಾಹನಗಳ ಕಾರ್ಯಕ್ರಮದ ಯಶಸ್ವಿ ಅನು?ನಕ್ಕಾಗಿ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ Mobile Veterinary Unit Call center ನ್ನು ರಾಜ್ಯ ಮಟ್ಟದಲ್ಲಿ ಸ್ಥಾಪಿಸಲಾಗಿದ್ದು, ೧೯೬೨ ಣoಟಟ ಜಿಡಿee ಸಂಖ್ಯೆಗೆ ಕರೆ ಮಾಡುವುದು ಮೂಲಕ ಸಾರ್ವಜನಿಕರು ಸರಳ ಮಾರ್ಗದಲ್ಲಿ ಸೇವೆ ಪಡೆಯಬಹುದಾಗಿದೆ.
ಇದರಲ್ಲಿ ಒಂದು ಪಾಳೆಯಲ್ಲಿ ಒಬ್ಬ ಪಶುವೈದ್ಯರು, ೩ ಜನ ಕೆರೆ ನಿರ್ವಾಹಕರಂತೆ ಒಟ್ಟು ೪ ಪಶುವೈದ್ಯರು ೧೨ ೩ ಪಾಳೆಯಗಳಲ್ಲಿ ದಿನದ ೨೪ ಗಂಟೆಗಳೂ ಕಾರ್ಯನಿರ್ವಾಹಕರು ಕಾರ್ಯನಿರ್ವಹಿಸಲಿದ್ದಾರೆ.
MVU ಗೆ ಸಂಬಂಧಪಟ್ಟಂತೆ ಹೊರಗುತ್ತಿಗೆ ಆಧಾರದ ಮೇಲೆ Seಡಿviಛಿe Pಡಿoviಜeಡಿ ಗಳ ಮುಖಾಂತರ ನೇಮಿಸಿಕೊಳ್ಳಲಾಗುವ ಪಶುವೈದ್ಯರುಗಳಿಗೆ ಮಾಸಿಕ ರೂ .೫೦,೦೦೦ ಅರೆ ತಾಂತ್ರಿಕ ಸಿಬ್ಬಂದಿಗೆ ರೂ. ೨೦,೦೦೦, ವಾಹನಚಾಲಕ ಕಮ್ ಗ್ರೂಪ್ ಡಿ ಗಳಿಗೆ ರೂ .೧೮೦೦೦ ಮತ್ತು ಕರ ನಿರ್ವಾಹಕರುಗಳಿಗೆ ರೂ .೧೫೦೦೦ ವೇತನವನ್ನು ಕೇಂದ್ರ ಸರ್ಕಾರವು ನಿಗದಿಪಡಿಸಿದ ಹಾಗೆ ವೇತನ ನೀಡಲಾಗುವುದು.
ಪ್ರತಿ ವಾಹನಕ್ಕೆ ಮಾಸಿಕ ರೂ ೩೩೦೦೦ ಗಳನ್ನು ಇಂದನ ಖರೀದಿಗೆ ಮತ್ತು ರೂ ೩೫೦೦೦ ಗಳನ್ನು ತುರ್ತು ಔಷಧಿ ಖರೀದಿಗಾಗಿ, ಇದನ್ನು ಕೇಂದ್ರ ಮತ್ತು ರಾಜ್ಯದ ೬೦:೪೦ ರ ಅನುದಾನದಲ್ಲಿ ಭರಿಸಲಾಗುವುದು.
ಸಂಚಾರಿ ವಾಹನಗಳ ಸೇವೆಗಳನ್ನು ಪ್ರಾರಂಭಿಸಲು ಅಗತ್ಯ ಪಶುವೈದ್ಯರು ಮತ್ತು ಸಿಬ್ಬಂದಿಗಳನ್ನು ಹೊರಗುತ್ತಿಗೆ ಆಧಾರದ ಮೇಲೆ Service Provider ಗಳ ಮುಖಾಂತರ ನೇಮಿಸಿಕೊಳ್ಳಲು ದಿನಾಂಕ ೨೦-೦೫-೨೦೨೨ ರಂದು e-procurement ನಲ್ಲಿ ಟೆಂಡರ್ ಆಹ್ವಾನಿಸಲಾಗಿತ್ತು. ಅದರಂತೆ ಸದರಿ ಟೆಂಡರ್‌ನಲ್ಲಿ M/s GVK Emergency Management and Research Institute ಎಂಬ ಸಂಸ್ಥೆ ಮಾತ್ರ ಬಿಡ್ ನಲ್ಲಿ ಭಾಗವಹಿಸಿ ಟೆಂಡರ್ ಪಡೆದುಕೊಂಡಿದೆ.
ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ನಂತರ ಪಶುವೈದ್ಯರು ಮತ್ತು ಸಿಬ್ಬಂದಿಗಳನ್ನು ನೇಮಿಸಿಕೊಂಡು ಅಗತ್ಯ ತುರ್ತು ಸಂಚಾರಿ ಪಶು ಚಿಕಿತ್ಸಾ ಸೇವೆಗಳನ್ನು ಪ್ರಾರಂಭಿಸಲಾಗಿದೆ.
ಸಹಾಯವಾಣಿ ಕರೆ ಕೇಂದ್ರದಲ್ಲಿ ಕರೆ ನಿರ್ವಾಹಕರು, ರೈತರು / ಜಾನುವಾರು ಮಾಲೀಕರಿಂದ ಸ್ವೀಕರಿಸಿದ ಫೋನ್ ಕರೆಗಳನ್ನು GPS ಮುಖಾಂತರ track ಮಾಡಿ ಸಹಾಯವಾಣಿ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಪಶುವೈದ್ಯರು ತುರ್ತು ಚಿಕಿತ್ಸೆ ಅಗತ್ಯತೆ ಬಗ್ಗೆ ನಿರ್ಧರಿಸಿ ಸಂಭಂಧಪಟ್ಟ ಜಿಲ್ಲೆ, ತಾಲ್ಲೂಕುಗಳಲ್ಲಿರುವ ಸಂಚಾರಿ ವಾಹನಗಳಲ್ಲಿ ಕಾರ್ಯನಿರ್ವಹಿಸುವ ಪಶುವೈದ್ಯರುಗಳಿಗೆ ಕೇಂದ್ರ ಸರ್ಕಾರವು ಅಭಿವೃದ್ಧಿ ಪಡಿಸಿರುವ PASHU SEVA KENDRA App ಮೂಲಕ ವರ್ಗಾಯಿಸಲಾಗುತ್ತದೆ.
ಸಾರ್ವಜನಿಕರು MVU call centre ನ್ನು ಜಾನುವಾರು ಆರೋಗ್ಯಕ್ಕೆ ಸಂಬಂಧಿಸಿದ ಕರೆಗಳನ್ನು ಸ್ವೀಕರಿಸಲು ಮತ್ತು ಅಗತ್ಯ ತುರ್ತು ಸೇವೆಯನ್ನು ಒದಗಿಸಲು ಮಾತ್ರ ಬಳಸಲು ಅವಕಾಶವಿರುತ್ತದೆ.
ಸ್ವೀಕರಿಸುವ ಪ್ರತಿ ಕರೆಗಳಿಗೆ docket Number ಒದಗಿಸಬೇಕಾಗಿದ್ದು, ಚಿಕಿತ್ಸೆ ನೀಡಿದ ಮಾಹಿತಿಯನ್ನು NDDB ರವರು ಅಭಿವೃದ್ಧಿ ಪಡಿಸಿರುವ ಇನಾಫ್ ತಂತ್ರಾಂಶದಲ್ಲಿರುವ treatment Module ನಲ್ಲಿ ದಾಖಲಿಸದ ನಂತರ ಸದರಿ docket Number ನ್ನು ಮುಕ್ತಾಯಗೊಳಿಸಬಹುದು.
ಪ್ರತಿ ತಿಂಗಳು ಸಂಚಾರಿ ಪಶು ಚಿಕಿತ್ಸಾ ಘಟಕದಡಿ ನೀಡಲಾದ ಚಿಕಿತ್ಸೆ ಕುರಿತು ವಾಹನವಾರು ಪುಗತಿವರದಿಯನ್ನು ಇಲಾಖೆ ಗೆ ಸಲ್ಲಿಸಿದ ನಂತರ ಸೇವಾ ಇಲಾಖೆಯಿಂದ ಟೆಂಡರ್ ಶುಲ್ಕ (ವೇತನ ಮತ್ತು ನಿರ್ವಹಣಾ ವೆಚ್ಚ) ನ್ನು ಮುಖಾಂತರ ನಿಗಧಿಗೊಳಿಸಿದ Service Provider ಗೆ ಬಿಡುಗಡೆಗೊಳಿಸಲಾಗುತ್ತದೆ.
ಮೇಲ್ಕಂಡಂತೆ ಸಂಚಾರಿ ಪಶು ಚಿಕಿತ್ಸಾ ಘಟಕದ ಕಾರ್ಯಗಳ ಉಸ್ತುವಾರಿ ಮತ್ತು ಸಂಬಂಧಪಟ್ಟ ತಾಲ್ಲೂಕು ಮುಖ್ಯ ಜಿಲ್ಲೆಗಳ ಉಪನಿರ್ದೇಶಕರು ಗಳು ಮೇಲ್ವಿಚಾರಣೆಯನ್ನು ಪಶುವೈಧ್ಯಾಧಿಕಾರಿಗಳು ಮತ್ತು ನಿರ್ವಹಿಸುತ್ತಾರೆ.
ಪ್ರಯಾಣದ ಸಮಯವನ್ನು ಕಡಿಮೆ ಮಾಡಲು ಮತ್ತು ಉದ್ದೇಶಿತ ಸಮಯದೊಳಗೆ ರೈತರಿಗೆ ಸೇವೆಯನ್ನು ಒದಗಿಸಲು ಸಂಚಾರಿ ಪಶು ಚಿಕಿತ್ಸಾ ವಾಹನಗಳು ಸಹಾಯಕಾರಿಯಾಗುತ್ತವೆ. ಸಾರ್ವಜನಿಕರು ಯಾವುದೇ ತೋದರೆ ಇಲ್ಲದೆ ತಾವು ಇರುವ ಸ್ಥಳದಲ್ಲಿಯೇ ಜಾನುವಾರುಗಳಿಗೆ ಚಿಕಿತ್ಸೆ ಒದಗಿಸಲು ಈ ಸೇವೆ ಅತ್ಯುತ್ತಮವಾಗಿದೆ.
ಕಾಂಗ್ರೆಸ್ ಅಭಿವೃದ್ಧಿ ಕೆಲಸಗಳೇ ಮುಂದಿನ ಚುನಾವಣೆಯಲ್ಲಿ ವರದಾನ: ಶಾಸಕಿ ಲಕ್ಷ್ಮೀ ಹೆಬ್ಬಾಳಕರ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ