ದೇವಸ್ಥಾನ ಜೀರ್ಣೋದ್ಧಾರಕ್ಕಾಗಿ 15 ಲಕ್ಷ ರೂ. ಚೆಕ್ ಹಸ್ತಾಂತರ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಗ್ರಾಮೀಣ ಕ್ಷೇತ್ರದ 2 ದೇವಸ್ಥಾನಗಳ ಜೀರ್ಣೋದ್ಧಾರಕ್ಕಾಗಿ 15 ಲಕ್ಷ ರೂ.ಗಳ ಚೆಕ್ ನ್ನು ಶುಕ್ರವಾರ ಹಸ್ತಾಂತರಿಸಲಾಯಿತು.
ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರ ಶಾಸಕರ ನಿಧಿಯಿಂದ ಧನಸಹಾಯ ಮಾಡಲಾಗಿದ್ದು, ಕ್ಷೇತ್ರದ ನಿಲಜಿ ಗ್ರಾಮದ ಅಲೌಕಿಕ ಮಂದಿರದ ಜೀರ್ಣೋದ್ಧಾರಕ್ಕಾಗಿ 10 ಲಕ್ಷ ರೂ. ಹಾಗೂ ಸಾಂಬ್ರಾ ಗ್ರಾಮದ ಶ್ರೀ ಕಲ್ಮೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ 5 ಲಕ್ಷ ರೂ. ಗಳ ಚೆಕ್ ಗಳನ್ನು ಆಯಾ ದೇವಸ್ಥಾನ ಸಮಿತಿಯವರಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಯುವಕಾಂಗ್ರೆಸ್ ಮುಖಂಡ ಚನ್ನರಾಜ ಹಟ್ಟಿಹೊಳಿ, ದೇವಸ್ಥಾನಗಳು ನಮ್ಮ ಸಂಸ್ಕೃತಿಯ ಪ್ರತೀಕವಾಗಿದೆ. ಗ್ರಾಮದಲ್ಲಿ ದೇವಸ್ಥಾನ ಇದ್ದರೆ ಆ ಗ್ರಾಮದಲ್ಲಿ, ಆ ಪ್ರದೇಶದಲ್ಲಿ ನೆಮ್ಮದಿ, ಶಾಂತಿ ಇರುತ್ತದೆ. ಹಣ ಸದುಪಯೋಗವಾಗಿ ಮಾದರಿಯಾಗಿ ದೇವಸ್ಥಾನ ನಿರ್ಮಾಣವಾಗಲಿ, ಜನರು ಸುಖ, ಶಾಂತಿ, ನೆಮ್ಮದಿಯಿಂದ ಬದುಕಲಿ ಎಂದು ಆಶಿಸಿದರು.
ಕ್ಷೇತ್ರದ ಜನರು ಮುಕ್ತ ಮನಸ್ಸಿನಿಂದ ಸಹಕಾರಿ, ಪ್ರೋತ್ಸಾಹ ನೀಡುತ್ತಿರುವುದರಿಂದ ಇಡೀ ಗ್ರಾಮೀಣ ಕ್ಷೇತ್ರ ಆದರ್ಶ ಕ್ಷೇತ್ರವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತಿದೆ. ಇತಿಹಾಸದಲ್ಲೇ ಕ್ಷೇತ್ರ ಕಂಡರಿಯದ ರೀತಿಯಲ್ಲಿ ಅಭಿವೃದ್ಧಿಯತ್ತ ಸಾಗುತ್ತಿದೆ. ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಕ್ಷೇತ್ರಕ್ಕಾಗಿ ಇನ್ನೂ ಹತ್ತಾರು ಕನಸುಗಳನ್ನು ಹೊತ್ತುಕೊಂಡಿದ್ದು, ನಾವೆಲ್ಲ ಅವರ ಬೆನ್ನಿಗೆ ನಿಲ್ಲಬೇಕಿದೆ ಎಂದು ಚನ್ನರಾಜ ಹಟ್ಟಿಹೊಳಿ ಹೇಳಿದರು.
ಈ ಸಂದರ್ಭದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಕಾರ್ಯಕರ್ತರು, ದೇವಸ್ಥಾನದ ಕಮೀಟಿಯವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ