ವ್ಯಾಟಿಕನ್ : ಸಾಮಾನ್ಯ ಸ್ಥಳಗಳಲ್ಲಿ ಉಡುಗೆ ತೊಡುಗೆಗಳು ಹೇಗೂ ಇರಲಿ, ಆದರೆ ಧಾರ್ಮಿಕ ಸ್ಥಳಗಳು, ಶೈಕ್ಷಣಿಕ ಸಂಸ್ಥೆಗಳಲ್ಲಿ ವಸ್ತ್ರ ಸಂಹಿತೆ ಇರುತ್ತದೆ. ಇಂಥಹ ಸ್ಥಳಗಳಲ್ಲಿ ಧರಿಸುವ ವಸ್ತ್ರಗಳು ಬೇರೆಯವರ ಭಾವನೆಯನ್ನು ಯಾವುದೇ ರೀತಿಯಲ್ಲಿ ಕೆಣಕುವಂತಿರಬಾರದು. ಹಿಂದೂ ಧರ್ಮದ ದೇವಸ್ಥಾನಗಳಲ್ಲಿ ಮಾತ್ರವಲ್ಲಿ ಕ್ರಿಶ್ಚಿಯನ್ ಸೇರಿದಂತೆ ಜಗತ್ತಿನ ಎಲ್ಲಾ ಧರ್ಮಗಳಲ್ಲೂ ಧಾರ್ಮಿಕ ಕ್ಷೇತ್ರದಲ್ಲಿ ವಸ್ತ್ರ ಸಂಹಿತೆ ಇದೆ.
ಇದಕ್ಕೆ ಉದಾಹರಣೆಯಾಗಿ ಮಾಡೆಲ್ ಒಬ್ಬಳು ತುಂಡುಡುಗೆ ತೊಟ್ಟ ಕಾರಣಕ್ಕೆ ಕ್ರಿಶ್ಚಿಯನ್ ಧರ್ಮೀಯರ ಪವಿತ್ರ ಕ್ಷೇತ್ರವಾದ ವ್ಯಾಟಿಕನ್‌ನಿಂದ ಹೊರದಬ್ಬಿಸಿಕೊಂಡ ಘಟನೆ ನಡೆದಿದೆ.
ಬ್ರೆಜಿಲ್ ಮೂಲದ ೩೪ ವರ್ಷದ ಚೆಲುವೆ ಜುಜು ವಿಯೆಯೈರಾ ಹೀಗೆ ಸೆಕ್ಸಿ ಲುಕ್ ತೋರಿಸಿ ಹೊರದಬ್ಬಿಸಿಕೊಂಡ ಮಾಡೆಲ್. ವ್ಯಾಟಿಕನ್‌ಗೆ ಪ್ರವಾಸದ ಉದ್ದೇಶಕ್ಕಾಗಿ ಬಂದಿದ್ದ ಇವಳು ಮೈಗೆ ಅಂಟಿಕೊಂಡಂತೆ ಕಾಣುವ ಬಿಗಿಯಾದ ತುಂಡು ಉಡುಗೆ ತೊಟ್ಟಿದ್ದಲ್ಲದೇ ಕಾಲಿಗೆ ಎತ್ತರದ ಹಿಮ್ಮಡಿಯ ಬೂಟ್ ಧರಿಸಿದ್ದಳು. ಅದರಿಂದ ಅವಳ ಮೈ ಮಾಟ ಮತ್ತಷ್ಟು ಮಾದಕವಾಗಿ ಗೋಚರವಾಗುವಂತಿತ್ತು ಎಂದು ವ್ಯಾಟಿಕನ್‌ನ ಮೂಲಗಳು ಆಂಗ್ಲ ಮಾಧ್ಯಮಗಳಿಗೆ ತಿಳಿಸಿವೆ.
ಈ ಕುರಿತು ಜುಜು, ನಾನು ಎಲ್ಲರಂತೆ ವ್ಯಾಟಿಕನ್‌ಗೆ ತೆರಳಿದ್ದೆ. ನಾನು ವಿಂಟರ್ ಧಿರಿಸನ್ನು ಧರಿಸಿದ್ದೇನೆ, ಇದು ಸೆಕ್ಸಿ ಉಡುಗೆ ಅಲ್ಲ ಎಂದು ವಿವರಿಸಿದೆ. ಆದರೆ ಅಲ್ಲಿದ ಗಣ್ಯರೊಬ್ಬರು ಇದು ಪ್ರಾರ್ಥನೆ ಸಲ್ಲಿಸುವ ಪವಿತ್ರ ಸ್ಥಳವಾಗಿದ್ದು ವಸ್ತ್ರ ಸಂಹಿತೆ ಉಲ್ಲಂಘಿಸಿದ್ದೀರಿ ಎಂದು ನನ್ನನ್ನು ಅಕ್ಷರಶಃ ಅಲ್ಲಿಂದ ಹೊರದಬ್ಬಿದರು. ನನಗೆ ವ್ಯಾಟಿಕನ್‌ನಲ್ಲಿ ವಸ್ತ್ರ ಸಂಹಿತೆ ಇರುವ ಬಗ್ಗೆ ಮಾಹಿತಿ ಇರಲಿಲ್ಲ ಎಂದು ಹೇಳಿಕೊಂಡಿದ್ದಾರೆ.
ವ್ಯಾಟಿಕನ್‌ನಲ್ಲಿ ಪುರುಷರು ಮತ್ತು ಮಹಿಳೆಯರಿಗೆ ನಿರ್ಧಿಷ್ಟ ವಸ್ತ್ರ ಸಂಹಿತೆ ಇದ್ದು, ಜುಜು ಅದನ್ನು ಉಲ್ಲಂಘಿಸಿದ್ದರಿಂದ ಅವರನ್ನು ಅಲ್ಲಿಂದ ಹೊರಗೆ ತೆರಳಲು ಸೂಚಿಸಲಾಗಿದೆ ಎಂದು ವ್ಯಾಟಿಕನ್ ಮೂಲಗಳು ತಿಳಿಸಿವೆ.
ಸಧ್ಯ ಅದನ್ನು ಮರೆತುಬಿಡಿ ಎಂದ ರೋಹಿತ್ ಶರ್ಮಾ !
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ